Breaking News

ರಕ್ತದ ಮಡುವಿನಲ್ಲಿ ಬಿದ್ದರೂ ಕ್ಯಾರೆ ಎನ್ನದ ಜನ

ಬೆಳಗಾವಿ;ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಲು ಹೋಗಿ ಬೆಳ್ಳಂಬೆಳಗ್ಗೆ ದ್ವೀಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡು ರಕ್ತದ ಮಡುವಿನಲ್ಲಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಾರದ ಘಟನೆ ಬೆಳಗಾವಿ ನಗರದ 3ನೇ ರೈಲ್ವೆ ಗೇಟ್ ಬಳಿ ನಡೆದಿದೆ. ಅದಕ್ಕೆ ಅನ್ನೋದು ಅವಸರವೇ ಅಪಘಾತಕ್ಕೆ ಕಾರಣ ಅಂತಾ.. ಹೌದು ಈಗಿನ ಜನರೇಶನ್ ಅವರಿಗೆ ಬೈಕ್ ರೈಡ್ ಮಾಡೋದು ಒಂದು ಶೋಕಿ… ಹೀಗೆ ಬೆಳ್ಳಂಬೆಳಗ್ಗೆ ರ್ಯಾಶ್ ಡ್ರೈವ್ ಮಾಡುತ್ತಿದ್ದ ಬೈಕ್ ಸವಾರರು ಬೈಕ್‍ನಿಂದ ಆಯ ತಪ್ಪಿ ಬಿದ್ದ ಘಟನೆ ಬೆಳಗಾವಿಯ ರೈಲ್ವೆ 3ನೇ ಗೇಟ್ ಬಳಿ ನಡೆದಿದೆ. ಆದ್ರೆ ರಕ್ತದ ಮಡುವಿನಲ್ಲಿ ಬಿದ್ದ ವ್ಯಕ್ತಿಯನ್ನು ಕಾಪಾಡಲೂ ಯಾರೊಬ್ಬರೂ ಮುಂದಾಗಲಿಲ್ಲ. ಬದಲಾಗಿ ತಮ್ಮ ಮೊಬೈಲ್‍ಗಳ ಮೂಲಕ ಶೂಟಿಂಗ್ ಮಾಡಲು ಮುಂದಾಗಿ ಅಮಾನವಿಯತೆ ಮೆರೆದಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಯಾರೂ ಕೂಡ ಮುಂದೆ ಬರಲಿಲ್ಲ. ಇದೇನಾ ಬೆಳಗಾವಿ ಜನರ ಮಾನವೀಯತೆ. ಇಷ್ಟು ಕ್ರೂರಿಗಳಾದ್ರಾ ಬೆಳಗಾವಿಜನಾ..? ಮೊದಲು ಜೀವನ್ ಮರಣದ ಮದ್ಯೆ ಹೋರಾಡುತ್ತಿದ್ದವರ ರಕ್ಷಣೆ ಕಾರ್ಯಕ್ಕೆ ಮುಂದಾಗಿ ಅವರನ್ನು ರಕ್ಷಿಸಿದರೆ ಅಲ್ಲೊಂದು ಜೀವಕ್ಕೆ ಹಾಗೂ ಅವರನ್ನೇ ನಂಬಿಕೊಂಡ ಒಂದು ಕುಟುಂಬಕ್ಕೆ ಸಹಾಯವಾದಂತಾಗುತ್ತದೆ. ಇನ್ನು ವಾಹನ ಸವಾರರೂ ಕೂಡ ತಮ್ಮ ರ್ಯಶ್ ಡ್ರೈವಿಂಗ್ ಬಿಟ್ಟು ಸುರಕಕ್ಷಿಕ ಚಾಲನೆಯತ್ತ ಗಮನ ಕೊಟ್ರೆ ಉತ್ತಮ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *