ಹುಬ್ಬಳ್ಳಿ: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಧಾರವಾಡ ಶಾಖೆಯ ವತಿಯಿಂದ ಆಸಕ್ತಿಯುಳ್ಳ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ನೀಡಲಾಗುತ್ತಿದೆ ಅಲ್ಲದೇ ಈಗಾಗಲೇ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು, ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ಮಾರುತಿ ಶೆಟ್ಟಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸರ್ಕಾರದ ಸ್ಕಿಲ್ ಇಂಡಿಯಾ ಪ್ರಾಯೋಜಿತ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ICA Edu,Skill pvt.Ltd ಸಂಸ್ಥೆಯ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸಲಾಗುತ್ತದೆ. ಅಲ್ಲದೇ ಅಪೇಕ್ಷಿತ ಅಭ್ಯರ್ಥಿಗಳು ನಗರದ ಶ್ರೀನಾಥ ಕಾಂಪ್ಲೆಕ್ಸ್ ನಾಲ್ಕನೇ ಮಹಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು. 8ನೇ ತರಗತಿಯಿಂದ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು ಅಲ್ಲದೇ ನೋಂದಣಿ ಹಾಗೂ ಉದ್ಯೋಗ ಪ್ಲೇಸ್ ಮೆಂಟನಲ್ಲಿ ಯಾವುದೇ ಶುಲ್ಕ ಇರುವದಿಲ್ಲ ಎಂದರು. ಈಗಾಗಲೇ 1000 ಹುದ್ದೆಗಳು ಲಭ್ಯವಿದ್ದು, ನಿರುದ್ಯೋಗಿ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನುಗುಣವಾಗಿ 3-4 ತಿಂಗಳ ಉಚಿತ ಕೈಗಾರಿಕೆಗೆ ಸಂಬಂಧಪಟ್ಟ ತರಬೇತಿ ಹಾಗೂ ಸ್ವಯಂ ಉದ್ಯೋಗ ಆಧರಿತ ಶಿಕ್ಷಣವನ್ನು ನೀಡಿ ಉದ್ಯೋಗ ಅವಕಾಶವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.ಪಿಟ್ಟರ್ ಎಲೆಕ್ಟ್ರಾನಿಕ್ ಅಸೆಂಬ್ಲಿ (ಐಟಿಐ,ಪಿಯುಸಿ), ಮೊಬೈಲ್ ರಿಪೇರಿ ಹಾರ್ಡವೇರ್ ಟೆಕ್ನಿಶಿಯನ್(10ನೇ ತರಗತಿ), ಪಿಲ್ಡ್ ಟೆಕ್ನಿಕಲ್ ಹೋಮ್ ಅಪ್ ಅಲೈಯನ್ಸ್ (8ನೇ ತರಗತಿ), ಐಟಿ ಹೆಲ್ಪ್ ಡೆಸ್ಕ್ ( ಪಿಯುಸಿ), ಸಿಆರ್ ಎಂ ಡೊಮೆಸ್ಟಿಕ್ ನಾನ್ ವೈಸ್( 10ನೇ ತರಗತಿ), ವ್ಯಕ್ತಿತ್ವ ವಿಕಸನ ಪ್ರೋಗ್ರಾಂ (ಸಾಮಾನ್ಯವಾಗಿ ಎಲ್ಲ ಕೋರ್ಸಗಳಿಗೆ ಅನ್ವಯ) ಈ ಎಲ್ಲ ತರಬೇತಿಗಳನ್ನು ನೀಡುವ ಮೂಲಕ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಒದಗಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಶ್ರೀಕಾಂತ್ ಹಡಪದ, ಸಂದೀಪ ಅಕ್ಕಿ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





