ಹುಬ್ಬಳ್ಳಿ: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಾಂಡವಾಡುತ್ತಿದೆ.ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗೌರವದಿಂದ ರಾಜೀನಾಮೆ ಕೊಟ್ಟು ಹೋಗಬೇಕು. ಇಲ್ಲವಾದ್ರೆ ಅವಮಾನದಿಂದ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.ನಗರದಲ್ಲಿಂದು ಮಾತನಾಡಿದ ಅವರು,ಐಎಎಂ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದೆ.ಮಂತ್ರಿ ಜಮ್ಮೀರ ಅಹ್ಮದ್ ಹೆಸರು ಕೇಳಿ ಬಂದಿದೆ.ರಾಜ್ಯ ಸರ್ಕಾರಕ್ಕೆ ಐಎಂಎ ಕಂಪನಿಯ ಬಗ್ಗೆ ಮಾಹಿತಿ ಇದ್ರು ಕ್ರಮ ಕೈಗೊಂಡಿಲ್ಲ.ಮನ್ಸೂರ್ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ. ಮನ್ಸೂರ ಜೀವಂತವಾಗಿದ್ರೆ ತಮ್ಮ ಹುಳುಕು ಹೊರ ಬರಬಹುದು ಅನ್ನೊ ಹೆದರಿಕೆ ಕೆಲವರಿಗೆ ಇದೆ.ಐಎಎಂ ನಲ್ಲಿ ಮೈತ್ರಿ ಸರ್ಕಾರದ ಸಚಿವರು ಇದ್ದಾರೆ.ಹಾಗಾಗಿ ಈ ಪ್ರಕರಣ ಸಿಬಿಐ ಗೆ ಒಪ್ಪಿಸಬೇಕು. ಮನ್ಸೂರ್ ರಕ್ಷಣೆ ಮಾಡಬೇಕು. ಆತ ಬದುಕಿ ಉಳಿಯಬೇಕು.ಮನ್ಸೂರ ಜೀವಂತವಾಗಿದ್ದರೆ ಮಾತ್ರ ಬಡವರ ಹಣ ಅವರ ಕೈ ಸೇರುತ್ತೆ. ಮುಸಲ್ಮಾನರ ಪರವಾದ ಸರ್ಕಾರ ಅಂತ ಹೇಳಿಕೊಳ್ಳೊ ಮೈತ್ರಿ ಸರ್ಕಾರ ಮುಸ್ಲಿಮರ ಹಿತ ಕಾಯುವಲ್ಲಿ ವಿಫಲವಾಗಿದೆ. ಈ ಪ್ರಕರಣ ಮುಚ್ಚಿಹಾಕಲು ಮೈತ್ರಿ ಸರ್ಕಾರ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ನ ಅನೇಕ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.ಹೀಗಾಗಿ ಸರ್ಕಾರದ ಬುಡಾ ಅಲುಗಾಡುತ್ತಿದೆ.ಆಪರೇಷನ್ ಕಮಲ ಮಾಡ್ತಾಯಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.ಅವರಿಗೆ ತಮ್ಮ ಶಾಸಕರನ್ನು ಹತೋಟಿಗೆ ಇಟ್ಟಿಕೊಳ್ಳುಲು ಆಗುತ್ತಿಲ್ಲಾ.ಈಗಾಲೇ ರಾಜೀನಾಮೆ ಪರ್ವ ಆರಂಭವಾಗಿದೆ.ಹೀಗಾಗಿ ಸಿಎಂ ಕುಮಾರಸ್ವಾಮಿ ಗೌರವದಿಂದ ರಾಜೀನಾಮೆ ನೀಡಲಿ. ಮೈತ್ರಿ ಸರ್ಕಾರದಕ್ಕೆ ಛೀ ಥೋ ಎನ್ನುವ ಸ್ಥಿತಿ ಬಂದಿದೆ.ರಾಜ್ಯದಲ್ಲಿ ಮೈತ್ರಿ ಸರ್ಕಾರ ಹೊದ್ರೆ ಕೇಂದ್ರದ ಹೈ ಕಮಾಂಡ್ ಗಮನಕ್ಕೆ ತರುತ್ತೇವೆ.ನಮ್ಮ ನಾಯಕರು ಬಿ.ಎಸ್. ಯಡಿಯೂರಪ್ಪ.ಮುಂದಿನ ಸಿಎಂ ಎಡಿಯೂರಪ್ಪನವರೇ ಅಂತ ಈಗಾಗಲೇ ಹೈಕಮಾಂಡ್ ತೀರ್ಮಾನಿಸಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





