ನೆಲಮಂಗಲ: ಕೂದಲು ಮಾರಾಟ ಮಾಡುವ ಮಹಿಳೆಯರು ಮನೆಯ ಬಾಗಿಲಿನಲ್ಲಿ ನಿಂತಿದ್ದ ಮಗುವನ್ನು ಚಾಕಲೆಟ್ ನೀಡುವುದಾಗಿ ಕರೆದು ಕೈಹಿ ಡಿದು ಹೋಗುವಾಗ ತಾಯಿ ಗಲಾಟೆ ಮಾಡಿ ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ದುರ್ಗಮ್ಮ, ಋತು, ಹನುಮಂತಮ್ಮ ಪೊಲೀಸ್ ವಶದಲ್ಲಿರುವ ಮಹಿಳೆ ಯರು, ಇವರು ಆಂಧ್ರ ಮೂಲದ ವರಾಗಿದ್ದು, ದಾಬಸ್ಪೇಟೆ ಭಾಗದಲ್ಲಿ ವಾಸವಾಗಿದ್ದಾರೆ. ಇಲ್ಲಿನ ಜಕ್ಕಸಂದ್ರ ದಲ್ಲಿ ಕೂದಲು ಖರೀದಿ ಮಾಡುವುದಾಗಿ ಹೇಳಿಕೊಂಡು ಬಂದು ಜಯ ಎಂಬುವರ ಮನೆಯ ಆವರಣದಲ್ಲಿ ನಿಂತಿದ್ದ 5 ವರ್ಷದ ರಚನಾ ಎಂಬ ಹೆಣ್ಣು ಮಗುವನ್ನು ಚಾಕಲೆಟ್ ನೀಡುವುದಾಗಿ ಕರೆದು ಕೈಹಿಡಿದುಕೊಂಡು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಗ ಮಗು ಕೂಗಿಕೊಂಡಿದೆ. ತಕ್ಷಣ ತಾಯಿ ಹೊರಗೆ ಬಂದು ಪ್ರಶ್ನೆ ಮಾಡುತ್ತಿದ್ದಂತೆ ಅವರ ಮೇಲೂ ಮಹಿಳೆಯರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಸ್ವಲ್ಪ ಸಮೀಪ ದಲ್ಲಿಯೇ ಬೈಕ್ನಲ್ಲಿ ನಿಂತಿದ್ದ ಪುರುಷ ನೊಬ್ಬ ಎಸ್ಕೇಫ್ ಆಗಿದ್ದು, ಮಹಿಳೆಯರನ್ನು. ಆಗ ಗ್ರಾಮಸ್ಥರು ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

