Breaking News

ಎರಡು ದಿನದಲ್ಲಿ ಮೈತ್ರಿ ಪತನ.. ಭವಿಷ್ಯ ನುಡಿದ ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.ಇನ್ನೇರಡು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದರು.ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ಇಲ್ಲದಿದ್ದರೆ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಕಾಂಗ್ರೇಸ್,ಜೆಡಿಎಸ್ ಅಧಿಕಾರಕ್ಕೆ‌ ಬಂದ್ರೂ‌ ಜನಪರ ಕೆಲಸ ಮಾಡಿಲ್ಲ. ಹೀಗಾಗಿ ಸಿಎಂಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಬಿಜೆಪಿ ಪಕ್ಷ ಯಾವುದೇ ರೀತಿಯ ಆಪರೇಷನ್ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ನಾಯಕರು ಯಾರೂ ಕೂಡ ಆಪರೇಷನ್ ಮಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ಯಡಿಯೂರಪ್ಪ ಸಿಎಂ ಆಗೋದು ಸತ್ಯ. ಅಧಿವೇಶನಕ್ಕೂ ಮುನ್ನ ಸರ್ಕಾರ ಬೀಳತ್ತೆ ಅಂದಿದ್ದೆ. ಅದು ಈಗ ಸತ್ಯವಾಗಿದೆ ಎಂದರು.ಇದೇ ವೇಳೆ ರಾಜೀನಾಮೆ ನೀಡಿದ ಶಾಸಕರಿಗೆ ರೇಣುಕಾಚಾರ್ಯ ಧನ್ಯವಾದ ಅರ್ಪಿಸಿದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *