ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಮತ್ತು ಗೊರೂರು ಅಣೆಕಟ್ಟೆಗಳಿಂದ ಒಣಗುತ್ತಿರುವ ಕಬ್ಬಿನ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧಕ್ಕೆ ತಮ್ಮ ಸಾಕು ಪ್ರಾಣಿಗಳೊಂದಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತನಾಯಕರಾದ ನಂದಿನಿಜಯರಾಮ್, ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗಧೀಶ್, ಮುದ್ದುಕುಮಾರ್, ನಾರಾಯಣಸ್ವಾಮಿ, ಬೂಕನಕೆರೆ ನಾಗರಾಜು, ಕರೋಟಿತಮ್ಮಯ್ಯ, ಕಾರಿಗನಹಳ್ಳಿ ಕುಮಾರ್, ಜಿ.ಪಂ ಮಾಜಿಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ಎ.ಎಲ್.ಕೆಂಪೂಗೌಡ ಸೇರಿದಂತೆ ನೂರಾರು ರೈತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಎತ್ತಿನಗಾಡಿಗಳು ಹಾಗೂ ತಮ್ಮ ಸಾಕುಪ್ರಾಣಿಗಳೊಂದಿಗೆ ಆಗಮಿಸಿ ರೈತರ ಜೀವನದ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವಂತೆ ಒಣಗುತ್ತಿರುವ ಬೆಳೆಗಳನ್ನು ಉಳಿಸಲು ಜಲಾಶಯಗಳಿಂದ ನೀರು ಹರಿಸುವಂತೆ ಒತ್ತಾಯಿಸಿದರು.ಪೋಲಿಸರು ಮಿನಿ ವಿಧಾನಸೌಧಕ್ಕೆ ರೈತರು ಪ್ರವೇಶ ಮಾಡದಂತೆ ತಡೆಯೊಡ್ಡಿದ್ದ ಬ್ಯಾರಿಕೇಡ್ ಗಳನ್ನು ಬೇಧಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆಹಾಕಿ ಮೆಟ್ಟಿಲುಗಳ ಮೇಲೆ ಕುಳಿತು ಶಾಸಕ ನಾರಾಯಣಗೌಡ ಹಾಗೂ ಜಿಲ್ಲಾ ಮಂತ್ರಿ ಪುಟ್ಟರಾಜು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಾಗಮಂಗಲ ಡಿವೈಎಸ್ ಪಿ ವಿಶ್ವನಾಥ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅವರ ನೇತೃತ್ವದಲ್ಲಿ ಭಾರೀ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಎಂ.ಶಿವಮೂರ್ತಿ ಪ್ರತಿಭಟನೆ ನಿರತ ರೈತರಿಂದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ತಿಳಿಸಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದರು..ರೈತರವಕೋರಿಕೆಯಂತೆ ತಾಲ್ಲೂಕಿನ ಮಾಕವಳ್ಳಿಯಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ಮುಖಂಡರ ಸಭೆ ನಡೆಸಿ ಕಾರ್ಖಾನೆಯ ಆರಂಭಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು…
bigtvnews | Hubli Dharwad News | Kannada News | Karnataka News Hubli News | News In Hubli | Local news





