ಹುಬ್ಬಳ್ಳಿ : ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡಿತ್ತಿದ್ದವರನ್ನು ಬಂಧಿಸುವಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿ ಪೋಲೀಸರು ಯಶಸ್ವಿಯಾಗಿದ್ದಾರೆ.ಹಳೇ ಹುಬ್ಬಳ್ಳಿಯ ಸಿದ್ದಾರೂಢ ನಗರದಲ್ಲಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲೀಸರು ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸಿದ್ದಾರೆ.ಈರವ್ವಾ ಪಾಂಚಾಣಾ (47), ಜಮೀರ ಮಾಲಾದಾರ (30) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಪೋಲಿಸರು ಹುಡುಕಾಟ ನಡೆಸಿದ್ದಾರೆ.ಬಂಧಿತರಿಂದ 340 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಪೋಲೀಸ ಆಯುಕ್ತ ನಾಗರಾಜ ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಗಳನ್ನು ಬಂಧಿಸಿದ್ದಾರೆ.ಪೋಲೀಸ್ ತಂಡಕ್ಕೆ ಆಯುಕ್ತರು 10,000 ರೂ. ನಗದು ಬಹುಮಾನ ನೀಡುವದಾಗಿ ಘೋಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





