Breaking News

ಮೈತ್ರಿ ಮುಖಂಡರು ಅತೃಪ್ತರ ಮನವೊಲಿಸದಿದ್ದರೆ ಸರ್ಕಾರ ಪತನ ಗ್ಯಾರಂಟಿ: ಬಸವರಾಜ ಹೊರಟ್ಟಿ.

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ‌ ಸಿದ್ದರಾಮಯ್ಯ ದೇವೇಗೌಡ್ರು ಭಿನ್ನರೊಂದಿಗೆ ಮಾತನಾಡಬೇಕು.ಇಲ್ಲವಾದರೆ ಸರ್ಕಾರ ಬಿಳೋದು ಗ್ಯಾರಂಟಿ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಎಂ‌ ಎಲ್ ಸಿ ಬಸವರಾಜ್ ಹೊರಟ್ಟಿ ಆತಂಕ ವ್ಯಕ್ತಪಡಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡರು ಪರಿಸ್ಥಿತಿಯನ್ನು ತಿಳಿಗೊಳಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ.ಈ ಸ್ಪೀಕರ್ ಬಗ್ಗೆ ಹೇಳುವುದು ಕಷ್ಟ, ಸ್ಪೀಕರ್ ಟೆಂಪರ್ ಕಳೆದುಕೊಂಡು ಸಿಟ್ಟಿಗೆದ್ದರೆ ಶಾಸಕರ ರಾಜೀನಾಮೆ ಆಗೋದು ಪಕ್ಕಾ. ಸ್ಪೀಕರ್ ಏನಾದರೂ ಶಾಸಕರ ರಾಜೀನಾಮೆ ಪರಿಗಣಿಸಿದರೆ ಸರ್ಕಾರ ಉಳಿಯುವದು ಬಹಳ‌ ಕಷ್ಟ ಎಂದರು.‌ಈ ರಾಜೀನಾಮೆ ಬೆಳವಣಿಗೆ ಹೀಗೆಯೇ ಮುಂದುವರೆದರೆ ಸಿ ಎಂ ಕುಮಾರಸ್ವಾಮಿ ಸರ್ಕಾರ ವಿಸರ್ಜನೆ ಮಾಡಿದ್ರು ಅಚ್ಚರಿ ಪಡಬೇಕಾಗಿಲ್ಲಾ ಅಷ್ಟೇ ಅಲ್ಲ ರಾಜ್ಯದಲ್ಲಿ ರಾಜ್ಯಪಾಲ ಆಡಳಿತ ತಂದ್ರು ಅಚ್ಚರಿ ಪಡಬೇಕಾಗಿಲ್ಲಾ ಎಂದು ತಿಳಿಸಿದರು. ‌ಸರ್ಕಾರ ಬಿದ್ದರು ಬಿಜೆಪಿಯವರು ಸರ್ಕಾರ ರಚನೆ ಮಾಡೋದು ಡೌಟ್ ಎಂದು ಅನುಮಾನ ವ್ಯಕ್ತಪಡಿಸಿದರು.‌

Share News

About admin

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *