ಆನೇಕಲ್:ಬೆಳ್ಳಂಬೆಳ್ಳಿಗೆ ಶಾಲಾ ಬಸ್ ಹಾಗು ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಶಾಲಾ ಮಕ್ಕಳು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗೊಂಡಿರುವಂತಹ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಜಂಗಲ್ ಪಾಳ್ಯ ರಸ್ತೆಯಲ್ಲಿ ನಡೆದಿದೆ.ಹೌದು ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಬನ್ನೇರುಘಟ್ಟ ಜಂಗಲ್ ಪಾಳ್ಯ ರಸ್ತೆಯಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲಾ ಬಸ್ ಹಾಗು ಖಾಸಗಿ ಗಾರ್ಮೆಂಟ್ಸ್ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ವರು ಶಾಲಾ ಮಕ್ಕಳು ಹಾಗು ಗಾರ್ಮೆಂಟ್ಸ್ ಬಸ್ನಲ್ಲಿದ್ದ ಮಹಿಳೆಯರು ಸೇರಿದಂತೆ ಚಾಲಕರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಬನ್ನೇರುಘಟ್ಟ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು ಘಟನೆಗೆ ಶಾಲಾ ಬಸ್ ಹಾಗು ಗಾರ್ಮೆಂಟ್ಸ್ ಬಸ್ ಚಾಲಕರ ಅತಿವೇಗದ ಚಾಲನೆಯಿಂದ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದ್ದು ಪ್ರಕರಣ ಸಂಬಂಧ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





