Breaking News

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ:

ಕ್ರಿಕೆಟ್ ಬೆಟ್ಟಿಂಗ್

ಬಡ್ಡಿ ವ್ಯವಹಾರ

ಅಪಹರಣ

ಕೊಲೆ ಪ್ರಕರಣಗಳು..

ಒಟ್ಟು 11 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲು..

ಹುಬ್ಬಳ್ಳಿ–ಧಾರವಾಡ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿಶೀಟರ್ ಹ್ಯಾರಿಸ್ ಪಠಾಣ್ (35) ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗಿದೆ…

ವಿದ್ಯಾಗಿರಿ ಪೊಲೀಸ್ ಠಾಣೆ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್, ಬಡ್ಡಿ ವ್ಯವಹಾರ, ಅಪಹರಣ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂಬ ಆರೋಪಗಳ ಹಿನ್ನೆಲೆ ಈ ಕ್ರಮ ಜರುಗಿದೆ…

ಪೊಲೀಸರು ಆರೋಪಿಯನ್ನು ಬಂಧಿಸಿ ಮೈಸೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ…

ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ…

2025ರಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ 06 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದ್ದು, 05 ಮಂದಿಯ ವಿರುದ್ಧದ ಆದೇಶವನ್ನು ಮಾನ್ಯ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಯು ಎತ್ತಿಹಿಡಿದಿತ್ತು..

2026ರಲ್ಲಿ ಇದು ಮೊದಲ ಗೂಂಡಾ ಕಾಯ್ದೆ ಕ್ರಮವಾಗಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ…

Share News

About Shaikh BigTv

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *