ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ!
ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ ಜಗಳಕ್ಕೆ ಪೊಲೀಸರೇ ಮಧ್ಯಪ್ರವೇಶ
ಬೆಕ್ಕು ಗರ್ಭಿಣಿ ಆಯ್ತು… ಆದರೆ ಜಗಳ ಯಾರದ್ದು…? ನೆರೆಹೊರೆಯವರ ‘ವಿಚಿತ್ರ’ ವಾರ್!
ಬೆಂಗಳೂರು: ಸಣ್ಣ ವಿಷಯಕ್ಕೆ ದೊಡ್ಡ ಗಲಾಟೆ ಆಗೋದು ಹೊಸದೇನಲ್ಲ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದ್ರೆ ನೀವು ಕೂಡ ನಕ್ಕುಬಿಡ್ತೀರಾ ಅಥವಾ ಆಶ್ಚರ್ಯ ಪಡ್ತೀರಾ ಅನ್ನೋದು ಖಚಿತ!.
ನಗರದ ಶೇಷಾದ್ರಿಪುರಂ ಪ್ರದೇಶದಲ್ಲಿ ಎರಡು ಮನೆಗಳ ನಡುವೆ ಜಗಳಕ್ಕೆ ಕಾರಣವಾದದ್ದು… ಒಂದು ಬೆಕ್ಕು! ಹೌದು, ಮನೆಯ ಹೆಣ್ಣು ಬೆಕ್ಕು ಗರ್ಭಿಣಿಯಾಗಿದ್ದಕ್ಕೆ ಪಕ್ಕದ ಮನೆಯ ಗಂಡು ಬೆಕ್ಕೇ ಕಾರಣ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ..
ಇದರಿಂದ ಆರಂಭವಾದ ಮಾತಿನ ಚಕಮಕಿಯೇ ದೊಡ್ಡ ಗಲಾಟೆಗೆ ತಿರುಗಿದೆ. ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡುತ್ತಿದ್ದಂತೆ, ಆ ಮರಿಗಳ ಜವಾಬ್ದಾರಿ ಪಕ್ಕದ ಮನೆಯವರೇ ಹೊತ್ತುಕೊಳ್ಳಬೇಕು ಎಂದು ಒತ್ತಾಯ ಶುರುವಾಗಿದೆ. ಇದಕ್ಕೆ ವಿರೋಧ ವ್ಯಕ್ತವಾದಂತೆ, ಎರಡು ಮನೆಯವರ ನಡುವೆ ಭಾರೀ ವಾಗ್ವಾದ, ನಿಂದನೆ, ಅವಾಚ್ಯ ಶಬ್ದಗಳ ರಂಪಾಟ ನಡೆದಿದೆ..
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಎರಡೂ ಪಕ್ಷಗಳನ್ನು ಸಮಾಧಾನಪಡಿಸಿದ್ದಾರೆ. ಕೊನೆಗೆ ‘ಸಮಾಧಾನ ಸೂತ್ರ’ವಾಗಿ ನಾಲ್ಕು ಮರಿಗಳಲ್ಲಿ ಎರಡೆರಡು ಬೆಕ್ಕುಗಳನ್ನು ಹಂಚಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.
ವಿಶೇಷ ಅಂದ್ರೆ, ಈ ವಿಚಿತ್ರ ಜಗಳದ ಬಗ್ಗೆ ಯಾವುದೇ FIR ದಾಖಲಾಗಿಲ್ಲ.
ಒಂದು ಬೆಕ್ಕಿನ ಕಥೆ… ಬೀದಿ ಮಟ್ಟದ ಗಲಾಟೆ!
bigtvnews | Hubli Dharwad News | Kannada News | Karnataka News Hubli News | News In Hubli | Local news

