Breaking News

ಉಗ್ರಗಾಮಿಗಳಿಗೆ ಟಾರ್ಗೆಟ್ ಆಗಿದೆಯಾ ಸಿಲಿಕಾನ್ ಸಿಟಿ

ಆನೇಕಲ್ : ಸಿಲಿಕಾನ್ ಸಿಟಿ ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು,ಅದ್ರೆ ಇದೀಗ ಸಿಲಿಕಾನ್ ಸಿಟಿ ಉಗ್ರಗಾಮಿಗಳ ಟಾರ್ಗೆಟ್ ಆಗಿದೆಯಾ ಎಂಬಾ ಸ್ಫೋಟಕ ಸುದ್ದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ,ಹೌದು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತನಿಖಾ ತಂಡ ಶಂಕಿತ ಉಗ್ರ ಹಬೀಬುರ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ,ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ದೇವನಹಳ್ಳಿಯ ಮಸೀದಿಯೊಂದರಲ್ಲಿ ಸಿಕ್ಕಿ ಬಿದ್ದ ಶಂಕಿತ ಉಗ್ರ ಹಬೀಬುರ್ ರೆಹಮಾನ್ ಕಳೆದ ವರ್ಷ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ನಂತರ ಶಿಕಾರಿ ಪಾಳ್ಯ ಬೇಗೂರಿನ ಮನೆಗಳನ್ನು ಬಾಡಿಗೆ ಪಡೆದು ಅಲ್ಲಿಯೇ ಬಾಂಬ್ ರಾಕೆಟ್ ತಯಾರಿಕೆ ಮಾಡಿ ಹೀಗೆ ತಯಾರಿಸಿದ ರಾಕೆಟ್ ಅನ್ನು ಕರ್ನಾಟಕ ಗಡಿ ತಮಿಳುನಾಡಿನ ಕೃಷ್ಣಗಿರಿ ಬೆಟ್ಟಕ್ಕೆ ಕೊಂಡೊಯ್ದ ಪ್ರಾಯೋಗಿಕವಾಗಿ ಮೂರು ರಾಕೆಟ್ಗಳನ್ನು ಉಡಾವಣೆ ಮಾಡಿ ಇದರ ಪೈಕಿ ಎರಡು ರಾಕೆಟ್ಗಳು ಯಶಸ್ವಿಯಾಗಿ ಉಡಾಯಿಸಿದ ಶಂಕಿತ ಉಗ್ರರು ಬೌದ್ದರನ್ನು ಗುರಿಯಾಗಿಸಿ ಸಂಚು ರೂಪಿಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ( ಎನ್ಐಎ) ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಗಳು ಹೊರಗಡೆ ಬಂದಿದೆ.ಇನ್ನು ಈ ಎಲ್ಲಾ ಘಟನೆಗಳನ್ನು ಒಮ್ಮೆಲೆ ನೋಡೊದಾದ್ರೆ ಸಿಲಿಕನ್ ಸಿಟಿ ಬೆಂಗಳೂರು ಉಗ್ರಗಾಮಿಗಳ ಕರಿನೆರಳಿನಲ್ಲಿ ಸಿಲುಕಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ನುವುದು ಈ ತನಿಖೆಯಿಂದ ಹೊರಬಂದಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *