Breaking News

ಮಿನಿವಿಧಾನಸೌಧಕ್ಕೆ ಹಸುಗಳನ್ನು ಕಟ್ಟಿ ವಿನೂತನ ಪ್ರತಿಭಟನೆ

ಮಂಡ್ಯ: ಹಸುಗಳನ್ನು ಕಚೇರಿಗೆ ಕಟ್ಟಿದ ರೈತ ಸಾಧುಗೋನಹಳ್ಳಿಯ ರೈತ ರಾಜೇಗೌಡರು ಹುಲ್ಲಿನ ಮೆದೆಯು ಸುಟ್ಟಿದ್ದರೂ ಸೂಕ್ತವಾದ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡದ ತಾಲ್ಲೂಕು ಆಡಳಿತದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಮಿನಿವಿಧಾನಸೌಧದ ಬಾಗಿಲಿಗೆ ಎರಡು ಸೀಮೆ ಹಸುಗಳನ್ನು ಕಟ್ಟಿಹಾಕಿ ತಾಲ್ಲೂಕು ಆಡಳಿತವೇ ಹಸುಗಳ ಪಾಲನೆ ಪೋಷಣೆ ಮಾಡುವಂತೆ ಒತ್ತಾಯಿಸಿದರು.ಕೃಷ್ಣರಾಜಪೇಟೆ ತಾಲ್ಲೂಕಿನ ಸಾಧುಗೋನಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಜಾನುವಾರುಗಳಿಗೆ ಸಂಗ್ರಹಿಸಿದ್ದ 50ಸಾವಿರ ರೂಪಾಯಿ ಮೌಲ್ಯದ ಹುಲ್ಲು ನಷ್ಟವಾಗಿರುವುದಕ್ಕೆ ಪರಿಹಾರ ಕೊಡಿಸಿ ಕೊಡುವಂತೆ ತಾಲೂಕು ಕಚೇರಿಗೆ ಸಾಧುಗೋನಹಳ್ಳಿಯ ರೈತ ರಾಜೇಗೌಡ ಅರ್ಜಿ ಸಲ್ಲಿಸಲು ತೆರಳಿದಾಗ ಮನವಿ ಪತ್ರ ಸ್ವೀಕರಿಸಲು ತಹಶೀಲ್ದಾರ್ ನಿರಾಕರಿಸಿರುವುದನ್ನು ಖಂಡಿಸಿದ ರೈತ ರಾಜೇಗೌಡ ಮನನೊಂದು ತಾನು ಜೀವನ ನಿರ್ವಹಣೆಗಾಗಿ ಸಾಕುತ್ತಿದ್ದ ಎರಡು ಹಸುಗಳನ್ನು ತಹಶೀಲ್ದಾರ್ ರವರಿಗೆ ನೀಡಲು ಕೆ.ಆರ್.ಪೇಟೆಗೆಹೊಡೆದುಕೊಂಡು ಬಂದು ಎರಡು ಸೀಮೆ ಹಸುಗಳನ್ನು ತಾಲೂಕು ಕಚೇರಿ ಮುಂಭಾಗ ಕಟ್ಟಿಹಾಕಿ ರಾಜೇಗೌಡ ವಿನೂತನವಾಗಿ ಪ್ರತಿಭಟಿಸಿ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿಭಟನೆಯ ವಿಚಾರ ತಿಳಿದ ತಹಶೀಲ್ದಾರ್ ಎಂ.ಶಿವಮೂರ್ತಿ ತಾಲ್ಲೂಕು ಆಡಳಿತರೈತಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ನಿನ್ನೆ ನಾನು ಕಛೇರಿಯಲ್ಲಿರಲಿಲ್ಲ, ಮಂಡ್ಯದ ಜಿ.ಪಂ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿರುವುದರಿಂದಾಗಿ ಸೆಸ್ಕ್ ಸೂಕ್ತ ಪರಿಹಾರ ನೀಡಿ ನೊಂದ ರೈತನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ.ತಹಶಿಲ್ದಾರರು ರೈತನಿಂದ ಅರ್ಜಿ ಸ್ವೀಕರಿಸಲಿಲ್ಲ, ರೈತನಿಗೆ ಅಪಮಾನ ಮಾಡಿ ಕಳಿಸಿದರು ಎಂಬ ಆರೋಪವು ಸುಳ್ಳಿನ ಕಂತೆಯಾಗಿದ್ದು ನಿರಾಧಾರವಾಗಿದೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಸ್ಪಷ್ಠಪಡಿಸಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *