ಉಡುಪಿ: ದೋಸ್ತಿ ಸರ್ಕಾರ ಪಥನವಾಗುತ್ತಿರುವ ಹಿನ್ನಲೆಯಲ್ಲಿ ಸೂಪರ್ ಸಿಎಂ ರೇವಣ್ಣ ಕರಾವಳಿಯಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಸರ್ಕಾರ ಸುಭದ್ರವಾಗಿರುವಂತೆ ಪ್ರಾರ್ಥಿಸಲು ರೇವಣ್ಣ ಇಂದು ಓಡೋಡಿ ದೇವರ ಮೊರೆ ಹೋಗಿದ್ದಾರೆ. ಉಡುಪಿಯ ಅನೆಗುಡ್ಡೆ ,ಹಟ್ಟಿಯಂಗಡಿ ಹಾಗೂ ಕೊಲ್ಲೂರು ದೇವಿ ದರ್ಶನ ಮಾಡಿದ್ದಾರೆ.
ಸರ್ಕಾರದ ಈ ಪರಿಸ್ಥಿತಿಗೆ ರೇವಣ್ಣರೇ ಕಾರಣ ಎನ್ನುವ ಹೇಳಿಕೆಯನ್ನ ಅತೃಪ್ತ ಶಾಸಕರು ನೀಡುತ್ತಿದ್ದಾರೆ.ಪ್ರತಿಕೆಲಸ ಕಾರ್ಯಗಳಲ್ಲೂ ರೇವಣ್ಣ ಮೂಗು ತೂರಿಸಿತ್ತಿಸುತ್ತಿದ್ದರು,ಸೂಪರ್ ಸಿಎಂ ತರಹ ವರ್ತಿಸುತ್ತಿದ್ದರು ಎಂದು ಶಾಸಕ ರಾಜಣ್ಣ ಹಾಗೂ ಮುನಿರತ್ನ ಅರೋಪಿಸಿದ ಬೆನ್ನಲ್ಲೆ ರೇವಣ್ಣ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





