Breaking News

ಶ್ರೀ ರಾಮಮಂದಿರ ಉದ್ಘಾಟನೆ

ಮಂಡ್ಯ: ಜಿಲ್ಲೆ ಕುಪ್ಪಹಳ್ಳಿ ಗ್ರಾಮದಲ್ಲಿಂದು ಶ್ರೀರಾಮತಾರಕ ಹೋಮ ಯಶಸ್ವಿಯಾಗಿ ನಡೆಯಿತು. ‌ಸೀತಾರಾಮಕಲ್ಯಾಣ, ಶ್ರೀ ರಾಮೋತ್ಸವ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು…ಶ್ರೀ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ ದಾನಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ 65ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಶ್ರೀ ರಾಮಮಂದಿರವನ್ನು ನಿರ್ಮಿಸಿದ್ದೇವೆ. ನಾಲ್ಕು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲು ಸಹಕರಿಸಿದ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸಿದರುಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣಪ್ರಸಾದ್ ರಾವ್ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಆದ್ದರಿಂದ ಸಮಾಜದಲ್ಲಿ ಜನಸಾಮಾನ್ಯರು ದೇವರು ಮತ್ತು ಧರ್ಮದ ಮಾರ್ಗದಲ್ಲಿಯೇ ಸಾಗಿ ಜೀವನದಲ್ಲಿ ಯಶಸ್ಸುಗಳಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಂಡಿಹೊಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಶೇಷಾದ್ರಿ, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದಕಾರಂತ್, ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ಕೇಶವಮೂರ್ತಿ, ದೇವಾಲಯ ಸಮಿತಿ ಟ್ಹಸ್ಟಿ ಹರೀಶ್, ಸುಬ್ರಹ್ಮಣ್ಯ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು…

Share News

About admin

Check Also

Featured Video Play Icon

ಹುಬ್ಬಳ್ಳಿಯಲ್ಲಿ ಇದೇನಾ ಟ್ರಾಫಿಕ್ ರೂಲ್ಸ್: ಜೀವದ ಹಂಗು ತೊರೆದು ಪ್ರಯಾಣ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ರೂಲ್ಸ್ ಗೆ ಬೆಲೆಯೇ ಇಲ್ಲದಂತಾಗಿದೆ. ಶಕ್ತಿ ಯೋಜನೆ ಜಾರಿಯಾಗಿ ಬಸ್ ಫುಲ್ ಆಗಿದ್ದು, ಒಂದೆಡೆಯಾದರೇ …

Leave a Reply

Your email address will not be published. Required fields are marked *

You cannot copy content of this page