ಹುಬ್ಬಳ್ಳಿ: ಬಿಹಾರಿ ಮೂಲದ ಜನರಿಗೆ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಟೆಂಡರ್‍ಗಳನ್ನು ನೀಡಬಾರದು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸೇನೆ ವತಿಯಿಂದ ಅಧ್ಯಕ್ಷರಾದ ಗಂಗಾಧರ ಪೆರೂರ ನೇತೃತ್ವದಲ್ಲಿಂದು ನಗರದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಬಳಿಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶೌಚಾಲಯ ನಿರ್ವಹಣೆ ಟೆಂಡರ್ ಕರೆದಿದ್ದು, 1-2 ಟೆಂಡರ್‍ನಲ್ಲಿ ಸ್ಥಳೀಯ ಹೆಸರನ್ನು ಕಿತ್ತು ಹಾಕಿ ಹಣದ ಆಮಿಷಕ್ಕೆ ಒಳಗಾಗಿ ಬಿಹಾರಿ ಜನಾಂಗದವರಿಗೆ ಟೆಂಡರ್ ಮಂಜೂರು ಮಾಡಿರುವುದು ಖಂಡನೀಯವಾಗಿದೇ ಕೂಡಲೇ ಬಿಹಾರಿ ಜನಾಂಗಕ್ಕೆ ಯಾವುದೇ ಟೆಂಡರ್ ನೀಡದಂತೆ ಎಚ್ಚರ ವಹಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.ಅಲ್ಲದೇ ನಯನಾ ಎಂಬುವ ಸಿಬ್ಬಂಧಿಯೊಬ್ಬರು 25,000 ರೂಪಾಯಿ ಹಣ ಪಡೆದು ಆದೇಶ ನೀಡುವುದಾಗಿ ಹೇಳಿ ಮೂರು-ನಾಲ್ಕು ತಿಂಗಳಾದರೂ ಕೂಡ ಯಾವುದೇ ಆದೇಶ ನೀಡಿಲ್ಲ ಅಲ್ಲದೇ ನಾವು ನೀಡಿದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡುತ್ತಿಲ್ಲ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆರೋಪಿಸಿದರು.ಪ್ರತಿಭಟನೆಯಲ್ಲಿ ಶಿವಶಂಕರ ತಲವಾಯಿ, ಸಂಜಯರಾಮ ಮಡಿವಾಳರ ಸೇರಿದಂತೆ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





