Breaking News

ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮಂಡ್ಯ: ಜಿಲ್ಲೆಯ ಬೂಕನಕೆರೆ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಗಂಜಿಗೆರೆ ಗ್ರಾಮದ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.‌ಧ್ವಜಾರೋಹಣ ಮಾಡಿ ಸಸಿಗೆ ನೀರು ಹಾಕುವ ಮೂಲಕ ಕ್ರೀಡಾಕೂಟವನ್ನು ಚಾಲನೆ ಮಾಡಲಾಯಿತು.‌ಗಂಜಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗಂಜಿಗೆರೆ ಮಹೇಶ್ ಗಂಜಿಗೆರೆ ಶಾಲೆಯ ಕ್ರೀಡಾಪಟು ಮಕ್ಕಳಿಗೆ ಸಮವಸ್ತ್ರವನ್ನು ವಿತರಣೆ ಮಾಡಲಾಯಿತುಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಪ್ರಧಾನ ಕಾಯದರ್ಶಿ ಯಾದ ಹೊಸಹೊಳಲು ಎಸ್ ಕೆ ರವಿಕುಮಾರ್ ,ಮಕ್ಕಳು ಈ ದೇಶದ ಶಕ್ತಿ, ಮಕ್ಕಳು ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸಿ ಹೋಬಳಿ ಮಟ್ಟದಲ್ಲಿ ಗೆದ್ದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ಹೋಗಿ ತಲುಪಬೇಕು ,ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಈ ಶಾಲೆಯ ಹೆಸರನ್ನು ನೀವು ಕೀರ್ತಿ ತರಬೇಕು .ಮುಖ್ಯವಾಗಿ ಇದಕ್ಕೆ ದೈಹಿಕ ಶಿಕ್ಷಕರು ಭೇದಭಾವ ಮಾಡದೆ ಎಲ್ಲಾ ಮಕ್ಕಳಿಗೆ ಉತ್ತಮ ತರಬೇತಿ ಕೊಟ್ಟು ಅವರನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು .ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ .ಜವರೇಗೌಡ ಕೃಷ್ಣೇಗೌಡ ,ಶೇಷಾದ್ರಿ, ಹಿರೇಮಠ್ ,ಅಂಕೇಗೌಡರು ,ಹಳೆ ವಿದ್ಯಾರ್ಥಿಗಳಾದ , ಅಧ್ಯಕ್ಷ ರಾದ ಮಹೇಶ್ ,ಸಾಗರ್, ಪ್ರವೀಣ್, ಮಂಜು ,ಸಿದ್ದರಾಜು ,ವಿಷ್ಣು ಕುಮಾರ್ ಉಪಸ್ಥಿತರಿದ್ದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *