Breaking News

ಟೀಂ ಇಂಡಿಯಾ ದೇಸಿ ಬ್ರ್ಯಾಂಡ್​ ಜರ್ಸಿಯಲ್ಲಿ ಮಿಂಚು

ಮುಂಬೈ: ಕಳೆದ ಮೂರು ವರ್ಷಗಳ ಕಾಲ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದ ಚೀನಾ ಮೂಲದ ಮೊಬೈಲ್​ ತಯಾರಿಕಾ ಕಂಪೆನಿ ಒಪ್ಪೋ ಬ್ರ್ಯಾಂಡ್​​ ಬದಲಾವಣೆಗೊಂಡಿದ್ದು, ಇದೀಗ ದೇಸಿ ಬ್ರ್ಯಾಂಡ್​ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಲಿದೆ.ಕೇರಳ ಮೂಲದ ಬೈಜುಸ್​​ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಲಿದ್ದು, ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್​ ಸರಣಿಯಿಂದ ಈ ಹೆಸರು ಟೀಂ ಇಂಡಿಯಾ ಜರ್ಸಿ ಮೇಲೆ ಕಾಣಸಿಗಲಿದೆ. 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ ಬರೋಬ್ಬರಿ 1079 ಕೋಟಿ ರುಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. ಅದಕ್ಕೂ ಮುಂಚಿತವಾಗಿ ವಿವೋ 768 ಕೋಟಿಗೆ ಈ ಬಿಡ್​ ಖರೀದಿ ಮಾಡಿತ್ತು. ಮಧ್ಯದಲ್ಲೇ ಒಪ್ಪೋ ಜರ್ಸಿ ಮೇಲೆ ಹಾಕಿರುವ ತನ್ನ ಬ್ರ್ಯಾಂಡ್​ ಹೆಸರು ತೆಗೆಯಲು ನಿರ್ಧರಿಸಿದೆ.ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜುಸ್ ಕಂಪೆನಿ ಪಡೆದುಕೊಂಡಿದ್ದು, ಬೈಜುಸ್​​ ಶೈಕ್ಷಣಿಕ ತಂತ್ರಜ್ಞಾನ ಟೂರಿಂಗ್ ಸಂಸ್ಥೆಯಾಗಿದೆ. ಇನ್ನು ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಒಪ್ಪೋ ಬ್ರ್ಯಾಂಡ್ ಕಾಣಲಿದ್ದು, ಸೆಪ್ಟೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಬೈಜುಸ್ ಲೊಗೊ ಕಂಡುಬರಲಿದೆ. 2022 ಮಾರ್ಚ್ 31ರ ವರೆಗೆ ಈ ಲೋಗೋ ಜರ್ಸಿಯಲ್ಲಿರಲಿದೆ.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *