ಗೆದ್ದು ಬೀಗಿದ ದಬಾಂಗ್ ಡೆಲ್ಲಿ ತಂಡ

ಹೈದರಾಬಾದ್​:ಬುಧವಾರ ತೆಲುಗು ಟೈಟನ್ಸ್​ ವಿರುದ್ಧ ಕೇವಲ ಒಂದು ಅಂಕದಿಂದ ಗೆಲುವು ಸಾಧಿಸಿದ್ದ ದಬಾಂಗ್​ ಡೆಲ್ಲಿ ಇಂದು ನಡೆದ ತಮಿಳ್​ ತಲೈವಾಸ್​ ವಿರುದ್ಧವೂ ಒಂದು ಅಂಕ ಅಂತರದ ರೋಚಕ ಜಯ ಸಾಧಿಸಿದೆ.ಮೊದಲಾರ್ಧದಲ್ಲಿ ಆರ್ಭಟಿಸಿದ ತಮಿಳ್​ ತಲೈವಾಸ್​ ದಬಾಂಗ್ ವಿರುದ್ಧ 18-11ರ ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್​ ಡೆಲ್ಲಿ ಕೊನೆಯ ರೈಡ್​ನಲ್ಲಿ ತಲೈವಾಸ್​ ತಂಡದ ಮಂಜಿತ್​ ಚಿಲ್ಲರ್ ಕೋರ್ಟ್​ನ ಕೊನೆಯ ಗೆರೆಯನ್ನು ತುಳಿದರು. ಪರಿಣಾಮ ಎದುರಾಳಿಯನ್ನು ಹಿಡಿದರೂ ಅಂಕ ಸಿಗದೆ ಗೆಲ್ಲುವ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತುದಬಾಂಗ್​ ಡೆಲ್ಲಿ ಕೊನೆಯ ರೈಡ್​ನಲ್ಲಿ ಎದುರಾಳಿಯಿಂದ ಉಡುಗೊರೆಯ ಒಂದು ಅಂಕದ ನೆರವಿನಿಂದ 30-29ರಲ್ಲಿ ಜಯ ಸಾಧಿಸಿತು. ತಂಡದ ರೈಡರ್​ ನವೀನ್​ ಕುಮಾರ್​ 8 ಅಂಕ, ಆಲ್​ರೌಂಡರ್​ ಮಿರಾಜ್​ ಶೇಖ್​ 6 , ಜೋಗಿಂದರ್​ ಸಿಂಗ್​ ನರ್ವಾಲ್​ 4 ವಿಶಾಲ್​ ಮನೆ 2 ಅಂಕ ಗಳಿಸಿದರು.

ತಮಿಳ್​ ತಲೈವಾಸ್​ ಪರ ರಾಹುಲ್​ ಚೌದರಿ 7, ಅಜಯ್​ ಠಾಕೂರ್​ 5 ಅಂಕ ಪಡೆದರೆ ಡಿಫೆಂಡರ್​ ಮಂಜೀತ್​ ಚಿಲ್ಲರ್​ 5, ಮೋಹಿತ್​ ಚಿಲ್ಲರ್​ 2, ಅಜಿತ್​ 2 ಅಂಕ ಪಡೆದು ಉತ್ತಮ ಪೈಪೋಟಿ ನೀಡಿದರು.

Share News

About admin

Check Also

ಅಪ್ಪು ಸ್ಮರಣಾರ್ಥ ನ.27, 28ರಂದು ಶೋಟೋಕಾನ್ ಕರಾಟೆ ಸ್ಪರ್ಧೆ

ಹುಬ್ಬಳ್ಳಿ: ಶೋಟೋಕಾನ್ ಕರಾಟೆ ಸಂಸ್ಥೆಯ ವತಿಯಿಂದ ಪವರ್ ಸ್ಟಾರ್‌ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ ಸ್ಮರಣಾರ್ಥವಾಗಿ ಮೂರನೇ ರಾಷ್ಟ್ರೀಯ ಮಟ್ಟದ …

Leave a Reply

Your email address will not be published. Required fields are marked *

You cannot copy content of this page