Breaking News

ಮಹಿಳಾ ಕಾಲೇಜು ಕಡೆ ಸುಳಿದಾಡುವ ಪುಂಡಪೋಕರಿಗಳ‌ ನಿಯಂತ್ರಣಕ್ಕೆ ಸಿದ್ದವಾಗಿದೆ ಓಬವ್ವ ಪಡೆ

ಚಿಕ್ಕಬಳ್ಳಾಪುರ:ಸುಮ್ಮನೇ ಒಂದು ಸಲ ಗರ್ಲ್ಸ್ ಕಾಲೇಜು ಬಳಿ ಹೋಗಿಬರೋಣ ಅಂತೇನಾದ್ರು ಹೋದರೆ ಮುಗೀತು ನಿಮ್ಮ ಕಥೆ.ಚಿತ್ರಧುರ್ಗಕ್ಕೆ ಮುತ್ತಿಗೆ ಹಾಕಲು ಹೋದ ಹೈದರಾಲಿ ಸೈನಿಕರನ್ನು ಸೆದೆಬಡಿದ ಒಬ್ಬ ವನಿಕೆ ಓಬವ್ವ ಇದ್ದಾರೆ .ಲವ್ವಿಡವ್ವಿ ಶುರು ಮಾಡಲು ಕಾಲೇಜು ಕಡೆ ತಲೆ ಹಾಕಿದರೆ ಅಲ್ಲಿ ಓಬವ್ವನ ಪಡೆ ಇದೆ ಎಚ್ಚರಿಕೆ .ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಶೈಕ್ಷಣಿಕವಾಗಿ ಸಿಕ್ಕಾಪಟ್ಟೆ ಪೈಪೋಟಿ ಇದೆ , ಈ ಹಿನ್ನೆಲೆ ಚಿಂತಾಮಣಿ ನಗರದಲ್ಲಿ ಸರ್ಕಾರಿ ಕಾಲೇಜುಗಳ ಜೊತೆಗೆ ಖಾಸಗೀ ಕಾಲೇಜುಗಳ ಸಂಖ್ಯೆಗೆ ಕಡಿಮೆ ಏನು ಇಲ್ಲ , ಹಳ್ಳಿಗಾಡು ಪ್ರದೇಶಗಳಿಂದ ಲಕ್ಷಾಂತರ ಮಹಿಳಾ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹರಿದು ಬರುತ್ತಿದ್ದಾರೆ , ಅಷ್ಟೇ ಪುಂಡಪೋಕಿರಿಗಳ ಹಾವಳಿಯೂ ಸಹ ಬಹಳಿಷ್ಟಿದೆ , ಅಮಾಯಕ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ಲವ್ವಿ ಡವ್ವಿ ಅಂತ ಅವರ ಭವಿಷ್ಯ ಹಾಳು ಮಾಡಿರುವ ಅದೆಷ್ಟೋ ಪ್ರಕರಣಗಳು ದಾಖಲಾಗಿವೆ , ಆದ್ದರಿಂದ ವಿದ್ಯಾರ್ಥಿನಿಯರನ್ನು ಪುಂಡಪೋಕಿರಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಚಿಂತಾಮಣಿ ನಗರ ಠಾಣೆಯಲ್ಲಿ ಓಬವ್ವ ಪಡೆಯನ್ನು ರಚನೆ ಮಾಡಿ ಚಾಲನೆ ನೀಡಿದರು ,ಇನ್ನು ಮುಂದೆ ಕಾಲೇಜುಗಳ ಸುತ್ತ ಮುತ್ತ ಓಬವ್ವ ಪಡೆ ಸುತ್ತಾಡಿ ಪುಂಡಪೋಕಿರಿಗಳನ್ನು ಹಿಡಿಯುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡಬೇಕು

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *