Breaking News

ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಧಾರವಾಡ:ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದಲ್ಲಿಯೇ ಆ್ಯಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡದ ಹೈಕೋರ್ಟ್‌ ಬಳಿ ನಡೆದಿದೆ.ದುರ್ಗದಕೇರಿ ಗ್ರಾಮದ ಕಾವೇರಿ ಮಾಳಗಿ ಎಂಬ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿತ್ತು.ಇಂದು‌ ಬೆಳಗಿನ ಜಾವ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಆ್ಯಬುಲೆನ್ಸ್‌ನ ರಸ್ತೆ ಪಕ್ಕ ನಿಲ್ಲಿಸಿ 108 ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.ಆ್ಯಂಬುಲೆನ್ಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಕಾವೇರಿ. ಹೆರಿಗೆಯಾದ ಬಳಿಕ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈಗ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ ಮುಂದಿನಮನಿ ಮತ್ತು ದೇವೇಂದ್ರ ಎಸ್.ಗಂಗಾಧರ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ 108 ಸಿಬ್ಬಂದಿ.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *