Breaking News

ಗಂಡನಿಂದಲೇ ಪತ್ನಿಯ ಭೀಕರ ಕೊಲೆ

ಆನೇಕಲ್ : ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಕಲಹ ಏರ್ಪಟ್ಟು, ಹೆಂಡತಿಯ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ.‌ಶಿಕಾರಿಪಾಳ್ಯ ದ ಮಲ್ಲಣ್ಣ ಎಂಬುವರ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಾಗಿದ್ದವೆಸ್ಟ್ ಬೆಂಗಲ್ ಮೂಲದ ಶೇಕ್ ಮತ್ತು ಮೀನಾ ಕಥನ್ ದಂಪತಿಗಳ ನಡುವೆ ಅಡುಗೆ ವಿಚಾರಕ್ಕೆ ಗಲಾಟೆ‌ ನಡೆದು ,ಕೊಲೆ ನಡೆದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯ ದಲ್ಲಿ ನಡೆದಿದೆ. ‌ಮೀನಾ ಕಥನ್ ಕೊಲೆಯಾದ ದುರ್ದೈವಿ.ಕೊಲೆ ಅರೋಪಿ ಶೇಕ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.ಸ್ಥಳಕ್ಕೆ ಡಿ.ವೈ ಎಸ್.ಪಿ ನಂಜುಂಡೇ ಗೌಡ ಹಾಗೂ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *