ಧಾರವಾಡ: ಕೆಲವರು ಈ ಸಂಬಂಧ ಕೋರ್ಟ್‌ಗೆ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶರಣಪ್ರಕಾಶ ಅವರ ಬೇಡಿಕೆಯೂ ಒಂದಿದೆ. 371ಜೆ ಗೆ ಶೇ.8 ರಷ್ಟು ಮೀಸಲಾತಿಯನ್ನು ಅವರು ಕೇಳಿದ್ದಾರೆ. 2023ರಲ್ಲಿ ಈ ಸಂಬಂಧ ಆದೇಶವಾಗಿದೆ. ಈ ಆದೇಶ ಪಾಲಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
545 ಪಿಎಸ್‌ಐ ನೇಮಕಾತಿಯ ಫಲಿತಾಂಶ ಸಂಬಂಧ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, 545 ಪಿಎಸ್‌ಐ ನೇಮಕ ಪ್ರಾರಂಭವಾಗಿದ್ದು 2020ರಲ್ಲಿ ಹೀಗಾಗಿ 2020 ನೋಟಿಫಿಕೇಶನ್ ನಲ್ಲಿ ಆಗಬೇಕು ಎಂಬುದು ಇನ್ನೊಂದು ವಾದ. ಇದನ್ನೇ ಈಗ ಕೋರ್ಟ್ ತೀರ್ಮಾನಿಸಬೇಕಿದೆ. ಕೋರ್ಟ್ ತೀರ್ಪು ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಜಿಟಿಡಿ ಅವರು ವಾಸ್ತವಾಂಶ ಮಾತನಾಡಿದ್ದಾರೆ. ಅವರು ಕಾಂಗ್ರೆಸ್‌ಗೆ ಬಂದರೆ ಶಕ್ತಿ ಅನ್ನೋ ಹಾಗಿದ್ದರೆ ಖಂಡಿತ ಅವರನ್ನು ಕರೆದುಕೊಳ್ಳುತ್ತೇವೆ. ಯಾರೇ ಬಂದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.
ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿರುವುದು ನನಗೆ ಕೇಳಿಸಿಲ್ಲ. ಮಾಧ್ಯಮಗಳಿಗೆ ಮಾತ್ರ ಕೇಳಿಸುತ್ತಿದೆ. ನನಗೆ ಕೇಳಿಸಿದಾಗ ನೋಡೋಣ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

