ಮಂಡ್ಯ : ಜಿಲ್ಲೆ ಕೆ. ಆರ್. ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ಗುಂಡಣ್ಣ ಲಲಿತಮ್ಮ ದಂಪತಿಗಳನ್ನು ಹತ್ಯೆಮಾಡಿ ತಲೆಮರೆಸಿಕೊಂಡಿದ್ದ ಪಕ್ಕದ ಮನೆಯ ವಾಸಿಯೇ ಆದ ಬೋರೇಗೌಡರ ಮಗ ಯೋಗೇಶನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಲೆಗೆ ಮತ್ತು ಮುಖಕ್ಕೆ ಹೊಡೆದು ಹತ್ಯೆಮಾಡಿರುವುದಾಗಿ ಯೋಗೇಶ ಒಪ್ಪಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು. ಜೋಡಿಕೊಲೆ ಹತ್ಯೆ ಆರೋಪಿಯನ್ನು ಎಎಸ್ ಪಿ ಬಲರಾಮೇಗೌಡ, ಡಿವೈಎಸ್ ಪಿ ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ಅಪರಾಧ ಪತ್ತೆ ಸಿಬ್ಬಂಧಿಗಳಾದ ಹೆಚ್.ಪ್ರಕಾಶ್, ಬಿ.ಎಸ್.ಚಂದ್ರಶೇಖರ್, ಬಸವರಾಜು, ಪ್ರಶಾಂತಕುಮಾರ್, ರಘು, ಗುರುಪ್ರಸಾದ್, ಚಾಲಕರಾದ ಮಂಜುನಾಥ ಮತ್ತು ವಾಸು ಭಾಗವಹಿಸಿದ್ದರು. ಜೋಡಿಕೊಲೆ ಆರೋಪಿಯನ್ನು ಪತ್ತೆಹಚ್ಚಿದ ಕೆ.ಆರ್.ಪೇಟೆ ಪೋಲಿಸರ ತಂಡವನ್ನು ಮಂಡ್ಯ ಎಸ್ ಪಿ ಶಿವಪ್ರಕಾಶ್ ದೇವರಾಜ್ ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





