Breaking News

ಕಾಂಗ್ರೆಸ್ ಜೊತೆ ಇನ್ನು ಮೈತ್ರಿ ಸಾಧ್ಯವೇ ಇಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಮಂಡ್ಯ: ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಮ್ಮ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನುವುದು ಮಾಧ್ಯಮಗಳ ಸೃಷ್ಠಿ..ಸುಳ್ಳಿನ ಕಂತೆ…ಕಾಂಗ್ರೆಸ್ ಜೊತೆ ಇನ್ನು ಮುಂದೆ ಮೈತ್ರಿ ಬಂದ್, ಉಪಚುನಾವಣೆಯಲ್ಲಿ ಎಲ್ಲಾ 17 ಸ್ಥಾನಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ರಾಜ್ಯದ ಜನರ ಹಿತಕ್ಕಾಗಿ ಮತ್ತು ನೊಂದವರ ಕಣ್ಣೀರನ್ನು ಒರೆಸಲು ನಾನು ರಾಜಕಾರಣ ಮಾಡುತ್ತಿದ್ದೇನೆಯೇ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ..ಕೋಮುವಾಧಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇಷ್ಟವಿಲ್ಲದಿದ್ದರೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಬೇಕಾಯಿತು…ದೇವರು ಅಧಿಕಾರ ಕೊಟ್ಟ ಮತ್ತೊಂದು ಕೈಯ್ಯಲ್ಲಿ ಅಧಿಕಾರ ಕಿತ್ತುಕೊಂಡ ಮುಖ್ಯಮಂತ್ರಿ ಅಧಿಕಾರ ಹೋಗಿದ್ದಕ್ಕೆ ನಾನು ಕಣ್ಣೀರು ಹಾಕಲಿಲ್ಲ, ನಂಬಿಕೆ ದ್ರೋಹಿ, ವಿಶ್ವಾಸಘಾತುಕ ಮುಂಬೈವಾಲ ನಾರಾಯಣಗೌಡ ನನ್ನ ಸಹೋದರಿ ಅನುಸೂಯಮಂಜುನಾಥ್ ಮತ್ತು ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ನಿಜವಾಗಿಯೂ ಸಂಕಟವಾಯ್ತು ಎಂದು ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರಗಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದರು… ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಕುಮಾರಣ್ಣ ಕೆಲಕಾಲ ಭಾವುಕರಾದರು…ಕ್ಷೇತ್ರದ ಶಾಸಕ ನಾರಾಯಣಗೌಡ ಅವರಿಗೆ ಕುಟುಂಬದ ಎಲ್ಲರೂ ಟಿಕೆಟ್ ಕೊಡಬೇಡಿ ಎಂದು ಹೇಳಿದರೂ ಕೇಳದೇ ಟಿಜೆಟ್ ಕೊಟ್ಟು ಗೆಲ್ಲಿಸಿದ ತಪ್ಪಿಗೆ ಸರಿಯಾದ ಶಾಸ್ತಿಯಾಗಿದೆ. ಇದಕ್ಕಾಗಿ ಕಾರ್ಯಕರ್ತರನ್ನು ದೂರಿದರೆ ಏನೂ ಪ್ರಯೋಜನವಿಲ್ಲ…ನನ್ನ ಮಗ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ…ನನ್ನ ಸಹೋದರಿ ಅನುಸೂಯಮಂಜುನಾಥ್ ಅವರಾಗಲೀ ಬೇರೆ ಯಾರೇ ಆಗಲಿ ಉಪ ಚುನಾವಣೆಗೆ ಹುರಿಯಾಳುಗಳಲ್ಲ…ಮಾಧ್ಯಮಗಳು ಇಲ್ಲಸಲ್ಲದ ಸುಳ್ಳು ವರದಿಗಳನ್ನು ಬಿತ್ತರಿಸಿ ನಮ್ಮ ಕುಟುಂಬದ ಸದಸ್ಯರ ತೇಜೋವಧೆ ಮಾಡಬೇಡಿ, ನಿಮಗೆ ಕೈಮುಗೀತೇನೆ ನಾನು ನನಗಾಗಿ ರಾಜಕಾರಣ ಮಾಡುತ್ತಿಲ್ಲ…ನೊಂದ ಜನರ ಕಣ್ಣೀರನ್ನು ಒರೆಸಲು ನಾನು ರಾಜಕಾರಣ ಮಾಡ್ತಿದ್ದೇನೆ. ನಾನು ಮಾಡುವ ಒಳ್ಳೆಯ ಕೆಲಸಗಳನ್ನು ಮಾಧ್ಯಮಗಳು ಪ್ರಚಾರ ಮಾಡಲ್ಲ..ಬದಲಾಗಿ ಯಾವುದಾದರಂದು ಅಕಸ್ಮಿಕವಾಗಿ ನಡೆದಿದ್ದ ಸಣ್ಣ ತಪ್ಪನ್ನೇ ದೊಡ್ಡದು ಮಾಡಿ ಎಪಿಸೋಡ್ ಗಳನ್ನು ಮಾಡಿ ತೋರಿಸ್ತಾರೆ…ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಲು ಮಾಧ್ಯಮಗಳು ನಡೆಸಿದ ವ್ಯಾಪಕ ಅಪಪ್ರಚಾರ ಕಾರಣ ಎಂದು ಕುಮಾರಸ್ವಾಮಿ ಕಿಡಿಕಾರಿದರು… ಸದ್ಯದಲ್ಲೇ ರಾಜ್ಯದಲ್ಲಿ ನಡೆಯುವ ಎಲ್ಲಾ 17ಸ್ಥಾನಗಳಲ್ಲಿಯೂ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ. ಇನ್ನು ಮುಂದೆ ರಾಜ್ಯದಲ್ಲಿ ಮೈತ್ರಿ ಬಂದ್ ಆಗಲಿದೆ..ಮೈತ್ರಿ ಎಂಬುದು ಮುಗಿದ ಅಧ್ಯಾಯವಾಗಿದೆ ಎಂದು ಕುಮಾರಸ್ವಾಮಿ ಮೈತ್ರಿಬೇಡ ಎಂಬ ಕಾರ್ಯಕರ್ತರ ಪ್ರಶ್ನೆಗೆ ಖಡಕ್ಕಾಗಿ ಉತ್ತರ ನೀಡಿದರು…ಪಕ್ಷದ್ರೋಹ ಮಾಡಿ, ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತಂದು ಹಣದಾಸೆಗಾಗಿ ಮಾರಾಟವಾಗಿರುವ ಶಾಸಕ ನಾರಾಯಣಗೌಡನಿಗೆ ತಕ್ಕ ಪಾಠವನ್ನು ಕಲಿಸಬೇಕು, ಉಪಚುನಾವಣೆಗೆ ಸ್ಥಳೀಯವಾಗಿ ಇಲ್ಲಿನವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು, ದಯಮಾಡಿ ನನ್ನ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ನೀಡಿದಂತೆ ವಿಷ ನೀಡಬೇಡಿ ನಿಮ್ಮ ಸಮ್ಮುಖದಲ್ಲಿಯೇ ಸರ್ವಸಮ್ಮತವಾದ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುತ್ತೇನೆ. ದಯಮಾಡಿ ಗೆಲುವಿನ ವಿಜಯಮಾಲೆ ತೊಡಿಸಿ ಪಕ್ಷಕ್ಕೆ ಶಕ್ತಿ ನೀಡಿ ಎಂದು ಕೈಮುಗಿದು ಮನವಿ ಮಾಡಿದರು… ಸಭೆಯಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾರಾ ಮಹೇಶ್, ಶಾಸಕರಾದ ಸಿ.ಎನ್.ಬಾಲಕೃಷ್ಣ, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಜೆಡಿಎಸ್ ಹಿರಿಯ ಮುಖಂಡ ಬಿ.ಎಲ್.ದೇವರಾಜು, ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ಮಾಜಿಅಧ್ಯಕ್ಷೆ ಪ್ರೇಮಕುಮಾರಿ, ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಬಸ್ ಕೃಷ್ಣೇಗೌಡ, ಕೊಡಗಹಳ್ಳಿ ಮಂಜೇಗೌಡ, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್, ಕೆ.ಜೆ.ತಮ್ಮಣ್ಣ, ಶ್ರೀಧರ ಸಿರಿವಂತ್, ರಾಜೇನಹಳ್ಳಿ ಕುಮಾರಸ್ವಾಮಿ, ಐನೋರಹಳ್ಳಿ ಮಲ್ಲೇಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು…

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *