ಚಿತ್ರದುರ್ಗ: ಕನ್ನಡ ಚಲನಚಿತ್ರ ಅಭಿಮಾನಿಗಳಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ ಕುರುಕ್ಷೇತ್ರ ಚಿತ್ರ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಚಿತ್ರದುರ್ಗದಲ್ಲಿಯೂ ಸಹ ಚಿತ್ರಕ್ಕೆ ಸಕತ್ ಓಪನಿಂಗ್ ದೊರಕಿದೆ. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಮುಂಜಾನೆ 4ಘಂಟೆಯಿಂದ ಆರಂಭವಾದ ಶೋ ಹೌಸ್ ಪುಲ್ ಆಗಿದ್ದು, ದಿನದ ಇನ್ನು ಮೂರು ಶೋದ ಟಿಕೆಟ್ ಸೋಲ್ಡ್ ಔಟ್ ಆಗಿದೆ.ದರ್ಶನ್ ಅಭಿಮಾನಿಗಳು ಕಟೌಟ್ ಗೆ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿದರು.ಇನ್ನು ಎರಡು ದಿನ ಸಾಲು ರಜ ಇರೋದ್ರಿಂದ ಜನ ಥೇಟರ್ ಕಡೆ ಬರೋದು ಗ್ಯಾರೆಂಟಿ.ಇನ್ನು ಎರಡು ದಿನದ ಎಲ್ಲಾ ಶೋನ ಟಿಕೆಟ್ ಸೋಲ್ಡ್ ಔಡ್ ಆಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





