Breaking News

ಕೆರೆಯಲ್ಲಿ ಮುಳುಗಿ ರೈತ ಆತ್ಮಹತ್ಯೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ
ವಳಗೆರೆಹಳ್ಳಿಯ ರೈತ ಶಿವರಾಮು (49) ಮದ್ದೂರು ಕೆರೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಾಯಿ ಸಣ್ಣಮ್ಮ ರವರ ಹೆಸರಿನಲ್ಲಿ 30. ಗುಂಟೆ ವಿಸ್ತೀರ್ಣದಲ್ಲಿ ಜಮೀನು ಹೊಂದಿದ್ದು ಕಬ್ಬು ಭತ್ತ ಹಾಗು ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಿದ್ದರು . ವ್ಯವಸಾಯದ ಉದ್ದೇಶಕ್ಕಾಗಿ ವಳಗೆರೆಹಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ರೂಪಾಯಿಗಳು .ಹಾಗು ಖಾಸಗಿ ಗಿರವಿ ಹಾಗೂ ಕೈ ಸಾಲ 2 . 50.000 / ರೂಪಾಯಿಗಳನ್ನು ಸಾಲ ಮಾಡಿದ್ದರು. ಬೇಸಾಯದಲ್ಲಿ ನಷ್ಟ ಉಂಟಾಗಿ
ಸಾಲ ತೀರಿಸಲಾಗದೇ ಮನ ನೊಂದ್ದಿದ್ದ ಇವರು ಐದು ದಿವಸಗಳ ಹಿಂದೆ ಗದ್ದೆ ಬಳಿ ಹೋಗುತ್ತೇನೆ ಎಂದು ಮನೆಯಿಂದ ಹೋದವರು ಮತ್ತೆ ಹಿಂದಿರುಗಲಿಲ್ಲ ಇಂದು ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಮದ್ದೂರು ಕೆರೆಯಲ್ಲಿ ಶವ ಪತ್ತೆ ಯಾಯಿತು . ಬೆಸಗರಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒತ್ತಾಯ ಪ್ರಕ್ರತಿ ವಿಕೋಪ ದಿಂದ ಅತಿವ್ರಷ್ಠಿ ಅನಾವ್ರಷ್ಠಿ ಯಿಂದ ಬೆಳೆನಷ್ಟ ಹೊಂದಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ದುರಂತ.ಆದ್ದರಿಂದ ಸರ್ಕಾರ ನೀರಿನ ನಿರ್ವಹಣೆ ಮತ್ತು ವಿಳಂಬನೀತಿಯಲ್ಲಿರುವ ಸಾಲ ಮನ್ನಾ ಯೋಜನೆ ತ್ವರಿತ ಗತಿಯಲ್ಲಿ ರೈತರಿಗೆ ತಲುಪಿಸಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಲ್ಲಾದ್ಯಕ್ಷ ವಿ.ಸಿ.ಉಮಾಶಂಕರ್ ಸರ್ಕಾರ ಮತ್ತು ಜಿಲ್ಲಾಡಳಿತ ವನ್ನು ಒತ್ತಾಯಿಸಿದ್ದಾರೆ

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *