ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದೆ.
ವಿಷ ಪ್ರಾಸನದ ಬಗ್ಗೆ ಮಾಹಿತಿಯಿಲ್ಲ ಎಂದು ಉಡುಪಿ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವ್ರು, ಶಿರೂರು ಸ್ವಾಮೀಜಿ ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೋ ಏನೋ ಗೊತ್ತಿಲ್ಲ.
ಲಿವರ್, ಕಿಡ್ನಿ ಫೇಲ್ ಆಗಿತ್ತು ಎಂದು ಮಾಹಿತಿ ಬಂದಿದೆ.
ಅವರಿಗೆ ವಿಷ ಪ್ರಷಾಣ ಯಾರು ಮಾಡ್ತಾರೆ.?
ಶಿರೂರು ಸ್ವಾಮೀಜಿಗಳಿಗೆ ವಿಷ ನೀಡೋ ಪ್ರಮೇಯವೇ ಇಲ್ಲ.
ಸ್ವಾಮಿಗಳು ಯಾರು ಕೊಲೆ ಮಾಡುವುದಿಲ್ಲ.
ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೇ ಯಾರಮೇಲು ಆರೋಪ ಮಾಡಬಾರದು.
ಅವರದು ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಒಂದು ಸಹಜ ಸಾವು. ಅವರ ಸಾವಿನ ಹಿಂದೆ ಸಂಶಯ ಮಾಡುವುದು ಸರಿಯಲ್ಲಾ .
ಅವರು ಕಳೆದ ಒಂದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದರು.
ಇಂದು ರಾತ್ರಿ ಉಡುಪಿಗೆ ಹೋಗುತ್ತೇನೆ, ಅಲ್ಲೇ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವ ಕುರಿತು ತೀರ್ಮಾನಿಸುತ್ತೇನೆ.
ಶಿರೂರು ಮಠದ ಭಕ್ತರಿಂದ ನನಗೆ ಯಾವುದೇ ಫೋನ್ ಕರೆ ಬಂದಿಲ್ಲ.
ಸೋದಿ ಮಠದವರು ಉತ್ತರಾಧಿಕಾರಿ ನೇಮಕ ಮಾಡುತ್ತಾರೆ.
ಸಲಹೆ ಕೇಳಿದ್ರೆ ಹೇಳುತ್ತೇನೆ.
ಫುಡ್ ಪಾಯ್ಸನ್ ಆಗಿದೆ ಎಂದು ಅವರ ಅಣ್ಣ ನನಗೆ ಫೋನ್ ಮಾಡಿ ಹೇಳಿದ್ರು.
ಪಟ್ಟದ್ದೇವರ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ.
ನಮಗೂ ಶಿರೂರು ಶ್ರೀಗಳ ಜೊತೆಗೂ ಸಂಪರ್ಕ ಇರಲಿಲ್ಲ.
ಅವರ ಕೆಲವು ಹೇಳಿಕೆಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿತ್ತು.
ವೈಯಕ್ತಿಕವಾಗಿ ನನಗೆ ಪ್ರೀತಿ ವಿಶ್ವಾಸವಿತ್ತು ಎಂದರು.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರಮಠ, ಉಡುಪಿ
bigtvnews | Hubli Dharwad News | Kannada News | Karnataka News Hubli News | News In Hubli | Local news





