ಕುಂದಗೋಳ : ಅಕ್ಟೋಬರ್ ದಿ.20 ಮತ್ತು 21 ರಂದು ತಾಲೂಕಿನಾದ್ಯಂತ ಬಿದ್ದ ಮಳೆಗೆ ಭೂಮಿಯಲ್ಲಿ ಇದ್ದ ಗೋವಿನಜೋಳ ಮೊಳಕೆ ಒಡೆದ ಸಂದರ್ಭದಲ್ಲಿ ಮತ್ತು ಶೇಂಗಾ ಬೆಳೆ ಭೂಮಿಯಲ್ಲಿ ಕಿತ್ತು ಒಕ್ಕಲು ಮಾಡಲು ಅವಕಾಶ ಇರಲಾರದೆ ಹಾನಿಯಾದ ಸಂದರ್ಭದಲ್ಲಿ ಹಾಗೂ ಹತ್ತಿ ಬೆಳೆಯು ಒಡೆದು ಮಳೆಗೆ ಸಿಕ್ಕು ಹಾಳಾಗಿರುವ ಸಂದರ್ಭದಲ್ಲಿ ಈಗಾಗಲೇ ಬೆಳೆ ವಿಮೆ ತುಂಬಿದ ರೈತರು “ಸ್ಥಳ ನಿರ್ದಿಷ್ಟ ವಿಕೋಪತೆ” ಅಡಿ ಪರಿಹಾರವನ್ನು ಪಡೆಯಲು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳಿಗೆ ತಿಳಿಸಿ ಅರ್ಜಿಯನ್ನು ಬೆಳೆ ವಿಮೆ ತುಂಬಿದ ಪಾವತಿ ಜೊತೆ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕರು ಕುಂದಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ವಿಮಾ ಕಂಪನಿಯ ಪ್ರತಿನಿಧಿಯಾದ ರಮೇಶ ಮೊಬೈಲ್ ಸಂಖ್ಯೆ 7259182711 ಇವರನ್ನೂ ಸಂಪರ್ಕ ಮಾಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

