Breaking News

ಕಾವೇರಿಯಿಂದ ತಮಿಳುನಾಡಿಗೆ ಹರಿದ ನೀರೆಷ್ಟು?

ಆಂಕರ್: ಮಳೆಗಾಲ ಆರಂಭವಾದರೂ ತಮಿಳುನಾಡಿಗೆ ಅವರ ಕೋಟಾದ ನೀರು ಹರಿಸುವುದು ಹೇಗೆ ಎಂಬ ಆತಂಕ ರಾಜ್ಯ ಸರ್ಕಾರ ಸೇರಿದಂತೆ ಕಾವೇರಿ ಕೊಳ್ಳದ ರೈತರಿಗೆ ಚಿಂತೆ ಆಗಿತ್ತು. ಆದರೆ ಮಳೆರಾಯ ಕೃಪೆಯಿಂದ ಕೋಟಾಗಿಂತ ಹೆಚ್ಚಿನ ನೀರೇ ಹರಿದು ಹೋಗಿದೆ‌. ಹಾಗಾದರೆ ಎಷ್ಟು ಹೋಗಿರಬಹುದು ಎಂಬ ಕುತೂಹಲ ನಿಮಗೆ ಬಂದಿದೆ. ಅದಕ್ಕೆ ಉತ್ತರ ಇಲ್ಲಿದೆ.
ಮಳೆಗಾಲ ಆರಂಭದಿಂದ ಇಲ್ಲೀ ವರೆಗೆ ಅಂದರೆ ಜೂನ್ ಮತ್ತು ಜುಲೈ ತಿಂಗಳ ಇಲ್ಲಿವರೆಗೆ 50 TMC ನೀರು ತಮಿಳುನಾಡಿನ ಮೆಟ್ಟೂರು ಜಲಾಶಯವನ್ನು ಸೇರಿದೆ.
ಜೂನ್ ತಿಂಗಳಲ್ಲಿ ಕೇವಲ 25 TMC ನೀರಿನ ಸಂಗ್ರಹಣೆ ಹೊಂದಿದ್ದ ಮೆಟ್ಟೂರು ಜಲಾಶಯ ಈಗ 75TMC ನೀರಿನ ಸಂಗ್ರಹವನ್ನು ಹೊಂದಿದೆ.
ಕಳೆದ ರಾತ್ರಿಯೇ ಅಧಿಕಾರಿಗಳು ಮೆಟ್ಟೂರು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದು, ಇಂದಿನಿಂದ ಕೃಷಿ ಚಟುವಟಿಕೆಗಾಗಿ ನಾಲೆಗಳಿಗೆ ನೀರು ಹರಿಸಲಿದ್ದಾರೆ.
ಪ್ರಸ್ತುತ ಈಗ ಮೆಟ್ಟೂರು ಜಲಾಶಯದಲ್ಲಿ 109 ಅಡಿ ನೀರಿನ ಸಂಗ್ರಹವಿದ್ದು, ಒಳ ಹರಿವಿನ ಪ್ರಮಾಣ 1,04,844 ಕ್ಯೂಸೆಕ್ ಇದೆ.
ಕೆ.ಆರ್.ಎಸ್.ತುಂಬಿದ ಮೇಲೆ ಇಲ್ಲೀ ವರೆಗೆ ಕಾವೇರಿ ನದಿಗೆ 22 TMC ನೀರನ್ನು ಬಿಡಲಾಗಿದೆ‌. ಅರ್ಥಾತ್ ತಮಿಳುನಾಡಿಗೆ ಹರಿಸಲಾಗಿದೆ. ತಿಂಗಳ ಅಂತ್ಯದೊಳಗೆ ಇನ್ನೂ 10 TMC ಗೂ ಹೆಚ್ಚು ನೀರು ಹರಿದು ಹೋಗುವ ಸಾಧ್ಯತೆ ಇದೆ‌.
ಕಬಿನಿಯಿಂದಲೂ ನದಿಗೆ ನೀರು ಬಿಡುತ್ತಿರುವುದರಿಂದ ಮೂರು ತಿಂಗಳ ಕೋಟ ಕೇವಲ 25 ದಿನಕ್ಕೆ ಮುಗಿಯುವ ಸಾಧ್ಯತೆಯೂ ಇದೆ ಅಂತ ಹೇಳಲಾಗುತ್ತಿದೆ‌‌.
ಪ್ರಸ್ತುತ ಕೆ.ಆರ್.ಎಸ್‌ನಲ್ಲಿ 124.10 ಅಡಿ ನೀರಿನ ಸಂಗ್ರಹವಿದ್ದು, ಒಳ ಹರಿವಿನ ಪ್ರಮಾಣ 58,719 ಕ್ಯೂಸೆಕ್ ಇದೆ‌. ಹೊರ ಹರಿವಿನ ಪ್ರಮಾಣ 26,844 ಕ್ಯೂಸೆಕ್ ಇದ್ದು, ಸಿಎಂ ಕುಮಾರಸ್ವಾಮಿ ಬಾಗೀನ ಅರ್ಪಿಸಿದ ನಂತರ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *