Breaking News

ಮೇಕೆ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ.? ಘಟನೆ ನಂತರ ಮೇಕೆ ಸಾವು

ಮೇವತ್​(ಹರಿಯಾಣ): ಹರಿಯಾಣದ ಮೇವತ್​ ಎಂಬಲ್ಲಿ ವಿಕೃತ ಮತ್ತು ವಿಚಿತ್ರ ಘಟನೆಯೊಂದು ನಡೆದಿದೆ. 8 ಮಂದಿಯ ಗುಂಪು ಮೇಕೆಯೊಂದನ್ನು ಮೇಕೆಯನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಕೆಯು ಮರಣಕ್ಕೀಡಾಗಿದೆ ಎಂದು ಮೇಕೆಯ ಮಾಲೀಕ ಅಸ್ಲು ಮೇವತ್​ನ ನಾಗಿನ ಪೊಲೀಸ್​ ಠಾಣೆಯಲ್ಲಿ ಜುಲೈ 26ರಂದು ದೂರು ದಾಖಲಿಸಿದ್ದಾರೆ. ಮೇಕೆಯ ಮೇಲೆ ಅತ್ಯಾಚಾರವೆಸಗಿದವರು ಮಾದಕ ವ್ಯಸನಿಗಳಾಗಿದ್ದು, ಘಟನೆ ನಡೆಯುವಾಗ ಮದ್ಯ ಸೇವಿಸಿದ್ದರು ಎನ್ನಲಾಗಿದೆ. 8 ಮಂದಿಯ ಪೈಕಿ ಮೂವರ ಗುರುತು ಪತ್ತೆ ಮಾಡಲಾಗಿದ್ದು ಎಲ್ಲರೂ ನಾಪತ್ತೆಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ನಾಗಿನ ಠಾಣೆ ಇನ್ಸ್​ಪೆಕ್ಟರ್ ರಾಜ್​ಭೀರ್​​, ಮೇಕೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ಅದರ ಮಾಲೀಕ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೇಕೆಯ ಮೃತದೇಹದ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *