Breaking News

ಮಲ ಸುರಿಕೊಳ್ಳಲು ಬಿಜೆಪಿ ನಾಯಕರೇ ಕಾರಣ- ಮೋಹನ್ ಹಿರೇಮನಿ

ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿರೋ ಗುತ್ತಿಗೆ ಪೌರ ಕಾರ್ಮಿಕರ ನಾಲ್ಕು ವೇತನ ಒಂದು ವಾರದೊಳಗೆ ನೀಡದಿದ್ರೇ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸೋದಾಗಿ ಪಾಲಿಕೆ ಸದಸ್ಯ ಮೋಹನ್ ಹಿರೇಮನಿ ಎಚ್ಚರಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಪಾಲಿಕೆಯಲ್ಲಿರೋ ಪೌರ ಕಾರ್ಮಿಕರ ಮೇಲೆ ಅಧಿಕಾರದಲ್ಲಿರೋ ಬಿಜೆಪಿ ಹಾಗೂ ಅಧಿಕಾರಿಗಳು ಹೊಲಸು ರಾಜಕೀಯ ಮಾಡ್ತಿದಾರೆ. ನಾಲ್ಕು ತಿಂಗಳಿನಿಂದ ವೇತನವಿಲ್ಲದೇ ಕಾರ್ಮಿಕರು ಬದುಕೋದಾದ್ರೂ ಹೇಗೆ ಹೇಳಿ, ಇಂಥದರಲ್ಲಿ ಪೌರ ಕಾರ್ಮಿಕರ ಪರ ಹೋರಾಡಿದವರನ್ನೇ ಗಡಿ ಪಾರು ಮಾಡ್ಬೇಕೆಂದು ಒತ್ತಡ ಹೇರುತ್ತಿದಾರೆ. ಪರೋಕ್ಷವಾಗಿ ಗಡಿಪಾರು ಮಾಡೋದಕ್ಕೆ ಯತ್ನಿಸ್ತಿರೋದು ನಾಚಿಕೆಗೇಡು, ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಲು ಪಾಲಿಕೆಯಲ್ಲಿರೋ ಬಿಜೆಪಿ ನಾಯಕರೇ ಕಾರಣ ಅಂತ ಮೋಹನ ಹಿರೇಮನಿ ಕಿಡಿಕಾರಿದ್ರು. ಮೋಹನ್ ಹಿರೇಮನಿ, ಪಾಲಿಕೆ ಕಾಂಗ್ರೆಸ್ ಸದಸ್ಯ

Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *