Breaking News

ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ: ಡಿಕೆಶಿ ಹೇಳಿಕೆಗೆ ಮುತಾಲಿಕ್ ಪ್ರತಿಕ್ರಿಯೆ

ಧಾರವಾಡ : ಶ್ರೀರಾಮಸೇನೆ ಸಂಘಟನೆ ಇದನ್ನು ವಿರೋಧ ಮಾಡುತ್ತವೆ. ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ.‌ಮುಸ್ಲಿಂ ವೋಟಿಗಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದ‌ ಪರಿಣಾಮ ಇಡೀ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆ ಎಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಕುರಿತು ಡಿಕೆಶಿ‌ ಹೇಳಿದ ವಿಚಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಾತನಾಡಿದ ಅವರು, ಆದರೂ‌ ಇವರಿಗೆ ಬುದ್ಧಿ ಬಂದಿಲ್ಲಾ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ‌ ಕೊಡೋದು ಸರಿಯಲ್ಲ. ಟೆರರಿಸ್ಟ್ ಗಳ‌ ಬಗ್ಗೆ ಫುಲ್ವಾಮಾ ಹಾಗೂ ಮುಂಬೈ ದಾಳಿ ಹೇಳಿಕೆ‌ ಸರಿಯಲ್ಲಾ. ನೂರಾರು‌ ಜನ ಸಾವಾಗಬೇಕಾ, ರಕ್ತ ಹರಿಯಬೇಕಾ, ಹೆಣಗಳು ಬೀಳಬೇಕಾ. ಪೊಲೀಸ್ ಇಲಾಖೆ ಇದನ್ನು ಹಿಡಿದು ಅನಾಹುತ ತಪ್ಪಿಸಿದ್ದಾರೆ. ಅದನ್ನ ಬಿಟ್ಟು ಟೆರರಿಸ್ಟ ಪರ ಮಾತನಾಡಿದ್ದು , ವೋಟಿಗಾಗಿ‌ ಹೇಳಿಕೆ ಕೊಟ್ಟಿದ್ದು ದೇಶಕ್ಕೆ ಅಪಾಯಕಾರಿ. ಇದನ್ನ ವಾಪಸ್ ಪಡೆದು ದೇಶಕ್ಕೆ ಕ್ಷಮೆ‌ ಕೇಳಬೇಕು. ಎಂದೂ ಈ ರೀತಿಯ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ದೇಶಕ್ಕೆ ಸುರಕ್ಷತೆ ಮುಖ್ಯ, ನಿಮ್ಮ ರಾಜಕಾರಣ ಅಲ್ಲಾ. ನಿಮ್ಮ ತುಷ್ಟಿಕರಣದಿಂದಲೇ ಇಲ್ಲಿಗೆ ಬಂದು‌ ನಿಂತಿದ್ದು ನೀವು ಇನ್ನು ಅರ್ಥ ಮಾಡಿಕೊಂಡಿಲ್ಲ. ಸರ್ವನಾಶ ಆಗಿ‌ ಹೋಗ್ತಿರಾ ನೀವು. ನಿಮ್ಮ ಹೇಳಿಕೆ ವಾಪಸ್ ಪಡೆಯದೇ ಇದ್ದರೆ ನಾವೂ ರಾಜ್ಯಾದ್ಯಂತ ಹೋರಾಟ ಮಾಡ್ತೆವೆ ಎಂದು ಎಚ್ಚರಿಕೆ ನೀಡಿದರು.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *