ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಮೂರು ಮಹತ್ವದ ವಿಷಯಗಳ ಕುರಿತು ತೀರ್ಪು ನೀಡುವ ಸಾಧ್ಯತೆಯಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ – ವರದಕ್ಷಿಣೆ ಕಿರುಕುಳ ವಿರೋಧಿ ಕಾನೂನನ್ನು ದುರ್ಬಲಗೊಳಿಸುವ 2017ರ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ಉಚ್ಛ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ನ್ಯಾಯಾಲಯ ವಕೀಲ ಮತ್ತು ಮಾಜಿ ಹಿರಿಯ ವಕೀಲ ಇಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಇಂದು ಮಲ್ಹೋತ್ರಾ ಅವರ ವಾದವನ್ನು ಆಲಿಸಲಿದೆ. ಅಪರಾಧದ ತನಿಖೆ ಪೊಲೀಸರ ಕೆಲಸವಾಗಿದ್ದು ಕುಟುಂಬ ಕಲ್ಯಾಣ ಸಮಿತಿಯದ್ದಲ್ಲ ಎಂದು ನ್ಯಾಯಾಧೀಶರು ವಾದ ಮಂಡಿಸಿದ್ದರು. ಕಳೆದ ಏಪ್ರಿಲ್ ನಲ್ಲಿ ತೀರ್ಪು ಕಾಯ್ದಿರಿಸಲಾಗಿತ್ತು.
ಕಳೆದ ವರ್ಷ ನ್ಯಾಯಾಧೀಶ ಎ ಕೆ ಗೋಯೆಲ್ ಮತ್ತು ಯು ಯು ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಆರೋಪಿ ವ್ಯಕ್ತಿಗಳನ್ನು ತಕ್ಷಣಕ್ಕೆ ಬಂಧಿಸುವುದನ್ನು ನಿಷೇಧಿಸಿ ಅದೇ ದಿನ ಅವರಿಗೆ ಜಾಮೀನು ನೀಡಬಹುದೆಂದು ತೀರ್ಪು ನೀಡಿದ್ದರು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರಚಿಸಿರುವ ಕೌಟುಂಬಿಕ ಕಲ್ಯಾಣ ಸಮಿತಿ ಹೇಳುವವರೆಗೆ ಯಾವುದೇ ಬಂಧನವಾಗಬಾರದು ಎಂದು ಇದೇ ನ್ಯಾಯಪೀಠ ಕಳೆದ ಬಾರಿ ತೀರ್ಪಿನಲ್ಲಿ ಹೇಳಿತ್ತು.
ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೋದ ಮಾಜಿ ವಿಜ್ಞಾನಿಯನ್ನು ಆರೋಪಮುಕ್ತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೂಡ ನ್ಯಾಯಪೀಠ ಇಂದು ತೀರ್ಪು ನೀಡುವ ಸಾಧ್ಯತೆಯಿದೆ. ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕುಷ್ಠರೋಗ ಪೀಡಿತ ವ್ಯಕ್ತಿಗಳಿಗೆ ವಿಚ್ಛೇದನ ಕುರಿತು ಅಸ್ತಿತ್ವದಲ್ಲಿರುವ ತಾರತಮ್ಯ ಕಾನೂನನ್ನು ತೆಗೆದುಹಾಕುವ ಸಾಧ್ಯತೆಯಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





