Breaking News

ಲೈಂಗಿಕ ದೌರ್ಜನ್ಯ: ಸಂತ್ರಸ್ತರು ಆನ್​ಲೈನ್​ನಲ್ಲೇ ದೂರು

ನವದೆಹಲಿ: ಅತ್ಯಾಚಾರಕ್ಕೊಳಗಾದ ಯಾವುದೇ ಸಂತ್ರಸ್ತರು ಇನ್ನು ಮುಂದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಒದ್ದಾಡುವ ಹಾಗೂ ದೂರು ದಾಖಲಿಸಲು ನೂರೆಂಟು ತಕರಾರುಗಳನ್ನು ಕೇಳುವ ಪ್ರಮೇಯವೆ ಬರಲ್ಲ . ಯಾಕಂದ್ರೆ ಸಂತ್ರಸ್ತರು ಇನ್ನು ಮಂದೆ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ದೂರು ಸಲ್ಲಿಸಬಹುದಾಗಿದೆ. ದೂರುಗಳನ್ನು ಸ್ವೀಕರಿಸಲೆಂದೇ ಕೇಂದ್ರ ಗೃಹ ಇಲಾಖೆ ಹೊಸ ಪೋರ್ಟಲ್​ವೊಂದನ್ನ ಲೋಕಾರ್ಪಣೆಗೊಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್ ಈ ಹೊಸ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಮಕ್ಕಳ ಅಶ್ಲೀಲ ದೃಶ್ಯ ಸೆರೆಹಿಡಿಯುವ ಹಾಗೂ ಲೈಂಗಿಕ ದುರುಪಯೋಗ, ಅತ್ಯಾಚಾರ, ಗ್ಯಾಂಗ್​ರೇಪ್​ಗೆ​ ಸಂಬಂಧಿಸಿದ ದೂರುಗಳನ್ನು ಸಂತ್ರಸ್ತರು ತಮ್ಮ ಮೊಬೈಲ್​ನಿಂದಲೇ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಲೈಂಗಿಕ ಅಪರಾಧಿಗಳ ಡಾಟಾಬೇಸ್​ ಹೊಂದಿರೋ ಪೋರ್ಟಲ್​ನ್ನು ಹೊರತರಲು ಗೃಹ ಸಚಿವಾಲಯ ನಿರ್ಧರಿಸಿದೆ. ಈಗಾಗಲೇ 4.4ಲಕ್ಷಕ್ಕೂ ಅಧಿಕ ಲೈಂಗಿಕ ಅಪರಾಧಿಗಳ ಮಾಹಿತಿ ದಾಖಲಾಗಿದ್ದು 2005ರ ನಂತರದ ಡಾಟಾಬೇಸ್​ನ್ನು ಪೋರ್ಟಲ್​ಗೆ ಅಪ್​ಡೇಟ್​ ಮಾಡುವಂತೆ ಎಲ್ಲಾ ರಾಜ್ಯದ ಪೊಲೀಸರಿಗೆ ಮನವಿ ಮಾಡಿದೆ. ಇದರಿಂದ ಲೈಂಗಿಕ ಅಪರಾಧಿಗಳನ್ನು ಚುರುಕಾಗಿ ಪತ್ತೆ ಹಚ್ಚಿ ತನಿಖೆ ಮಾಡಬಹುದು ಎಂದು ತಿಳಿಸಿದ್ದಾರೆ. ಇನ್ನು ಈ ಡಾಟಾಬೇಸ್​ನಲ್ಲಿ ಪ್ರತಿ ದೂರುದಾರರ ಹೆಸರು, ವಿಳಾಸ, ಭಾವಚಿತ್ರ, ಹಾಗೂ ಬೆರಳಿನ ಗುರುತುಗಳು ದಾಖಲಾಗಲಿದೆ. ಈ ಮಾಹಿತಿ ಕೇವಲ ಸಂಬಂಧಿತ ಇಲಾಖೆಗೆ ಮಾತ್ರ ಸೀಮಿತವಾಗಿದ್ದು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಅಲ್ಲದೇ ದೂರು ಸಲ್ಲಿಸಿದವರ ಮಾಹಿತಿಯನ್ನೂ ಸಹ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *