ಮಂದಿಯ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ತಾಕಿಮ್ ಮತ್ತು ನೌಷದ್ ತಲೆಮರೆಸಿಕೊಂಡಿದ್ದರು. ಎರಡು ದಿನದ ಹಿಂದಷ್ಟೇ ಇದೇ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪರಾರಿಯಾಗಿದ್ದ ಮುಸ್ತಾಕಿಮ್ ಮತ್ತು ನೌಷದ್ ಅಡಗಿರುವ ಸ್ಥಳದ ಖಚಿತ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚಾರಣೆಗಿಳಿಯುವ ಮುನ್ನ ಮಾಧ್ಯಮಗಳಿಗೆ ವಿಷಯ ಮುಟ್ಟಿಸಿ ಕಾರ್ಯಾಚರಣೆಯ ದೃಶ್ಯವನ್ನು ಸೆರೆ ಹಿಡಿಯಲು ಆಹ್ವಾನಿಸಿದ್ದಾರೆ.
ಇನ್ನು ಹಳೇ ಕಟ್ಟಡವೊಂದರಲ್ಲಿ ಅಡಗಿದ್ದ ಆರೋಪಿಗಳ ಅಡ್ಡೆಗೆ ದಾಳಿ ನಡೆಸಿದ ವೇಳೆ ಬೈಕ್ನಲ್ಲಿ ಆರೋಪಿಗಳು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ತಕ್ಷಣ ಬೆನ್ನಟ್ಟಿದ್ದ ಪೊಲೀಸರು ಸುಮಾರು 4 ಕಿ.ಮೀ ತನಕ ಚೇಸ್ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಸುಮಾರು 25 ರಿಂದ 30 ಸುತ್ತು ಗುಂಡು ಹಾರಿಸಿದ್ದು, ಪರಿಣಾಮ ಒಬ್ಬ ಪೇದೆಗೆ ಗಾಯಗಳಾಗಿವೆ. ಕ್ರಿಮಿನಲ್ಗಳು ಮತ್ತು ಪೊಲೀಸರ ನಡುವೆ ನಡೆದ 1 ಗಂಟೆಯ ಗುಂಡಿನ ಚಕಮಕಿಯಲ್ಲಿ ಆರೋಪಿಗಳಾದ ಮುಸ್ತಾಕಿಮ್ ಮತ್ತು ನೌಷದ್ನನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಡೀ ಈ ಎನ್ಕೌಂಟರ್ ಪ್ರಸಂಗವನ್ನ ಮಾಧ್ಯಮಗಳು ಸೆರೆ ಹಿಡಿದಿದ್ದು, ತಮ್ಮ ವಾಹಿನಿಗಳಲ್ಲೂ ಪ್ರಸಾರ ಮಾಡಿವೆ. ಇನ್ನು ಎನ್ಕೌಂಟರ್ಗೆ ಬಲಿಯಾದ ಮುಸ್ತಾಕಿಮ್ ಮತ್ತು ನೌಷದ್ ಮೇಲೆ ಈ ಹಿಂದೆಯೂ ಕೊಲೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿತ್ತು ಎಂದು ಅಲೀಘಡ್ನ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಾಹ್ನಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





