Breaking News

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರ

ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್  5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ. 
ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ ಲೈಂಗಿಕವಾಗಿ ಬಳಸಿಕೊಂಡಿದ್ದರೆಂದು ಆಕೆ ಪೋಷಕರ ಎದುರು ಬಾಯಿಬಿಟ್ಟಿದ್ದಾಳೆ. ಇದಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರುಸಲ್ಲಿಸಿದ್ದಾರೆ.
ಪಾಟ್ನಾ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಎಸ್ಪಿ) ಮನು ಮಹಾರಾಜ್ ಈ ಘಟನೆಯನ್ನು ದೃಢಪಡಿಸಿದ್ದು ಮತ್ತು ಈ ಘಟನೆಯ ವಿಚಾರವಾಗಿ  ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *