ಬೆಂಗಳೂರು: 8 ಮಂದಿ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಹಿತದೃಷ್ಟಿಯನ್ನ ಇಟ್ಟುಕೊಂಡು ಹಿರಿಯ ಹಾಗೂ ಕಿರಿಯ ಎಂಟು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಸಚಿವಾಲಯ ವರ್ಗಾವಣೆ ಮಾಡಿ, ತಕ್ಷಣದಿಂದಲೇ ಜಾರಿಯಾಗುವಂತೆ ಸೂಚನೆ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರ ಇಲ್ಲಿದೆ.
ಅನುರಾಧ ಜಿ. (ಅಪರ ಜಿಲ್ಲಾಧಿಕಾರಿ ಶಿವಮೊಗ್ಗ ಜಿಲ್ಲೆ)
ಸುರೇಶ್ ಬಿ.ಇಟ್ನಾಳ್ (ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆ)
ಅನಿತಾ ಲಕ್ಷ್ಮಿ (ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ)
ವೈಶಾಲಿ ಎಂ.ಎಲ್ (ಅಪರ ಜಿಲ್ಲಾಧಿಕಾರಿ, ಹಾಸನ)
ಜಿ.ವಿ.ನಾಗರಾಜ್ (ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ)
ಪಾತರಾಜು.ವಿ (ಉಪಕಾರ್ಯದರ್ಶಿ ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ)
ವಿಜಯ್ ಕುಮಾರ್ ಹೊನಕೇರಿ (ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ)
ಪ್ರೀತಂ ನಸ್ಲಾಪುರೆ (ಆಯುಕ್ತ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ)
bigtvnews | Hubli Dharwad News | Kannada News | Karnataka News Hubli News | News In Hubli | Local news





