ಹಾಸನ: ಕಳೆದ ಆಗಸ್ಟ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ರೈಲ್ವೆ ಹಳಿಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈಗ ರಿಪೇರಿ ಕಾಮಗಾರಿ ನಂತರ, ರೈಲು ಸಂಚಾರ ಪುನರಾರಂಭವಾಗಿದೆ. ಸದ್ಯ ಯಶವಂತಪುರದಿಂದ ಸಕಲೇಶಪುರವರೆಗೆ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಮಾರ್ಗ ಇನ್ನೂ ದುರಸ್ತಿಯಾಗದ ಕಾರಣ ಸರಕು ಸಾಗಣೆ ರೈಲು ಓಡಾಟ ಮತ್ತಷ್ಟು ವಿಳಂಬವಾಗಲಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ರಿಪೇರಿ ಕಾರ್ಯ ಪೂರ್ಣವಾಗೋ ನಿರೀಕ್ಷೆಯಿದ್ದು, ಮೊದಲು ಗೂಡ್ಸ್ ರೈಲು ಓಡಾಟಕ್ಕೆ ಅವಕಾಶ ಮಾಡಿಕೊಡಲಿದ್ದು, ನಂತರ ಪ್ಯಾಸೆಂಜರ್ ರೈಲು ಓಡಾಟ ನಡೆಸಲಾಗುವುದು ಅಂತಾ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





