ನವ ದೆಹಲಿ: ಮೀಟೂ ಸದ್ಯ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮಹಿಳೆಯರ ಮೇಲೆ ಗಪ್ಚುಪ್ಪಾಗಿ ನಡೆದ ಹಲವು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನ ನೋಡಿ ಎಲ್ಲರೂ ಆಶ್ಚರ್ಯವಾಗಿದ್ದಾರೆ. ಇಷ್ಟಕ್ಕೂ ಇದು ಹೇಗೆ ಪ್ರಾರಂಭವಾಯಿತು ಅಂತೀರಾ. ಹಾಲಿವುಡ್ನಲ್ಲಿ ವೀಯಾನ್ಸ್ಟೈನ್ ಎನ್ನುವ ನಿರ್ಮಾಪಕ ತನ್ನ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದನಂತೆ. ಆ ಮಹಿಳೆಯರನ್ನ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಅವರನ್ನ ರೇಪ್ ಮಾಡುತ್ತಿದ್ದನಂತೆ.. ವೀಯಾನ್ಸ್ಟೈನ್ ಹೀಗೆಯೇ ಸುಮಾರು 70ಕ್ಕೂ ಅಧಿಕ ಮಹಿಳೆಯರ ಬಾಳನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಿ, ಪತ್ರಕರ್ತೆಯೊಬ್ಬರು ನ್ಯೂಯಾರ್ಕ್ಸ್ ಟೈಮ್ಸ್ನಲ್ಲಿ ಆರ್ಟಿಕಲ್ ಬರೆದಿದ್ದರಂತೆ.
ಅದಾದ ಬಳಿಕ ಪ್ರತಿನಿತ್ಯ ಮೀಟೂ ಅಂತಾ ಹಲವಾರು ಮಹಿಳೆಯರು ಆರೋಪ ಮಾಡೋದಕ್ಕೆ ಶುರುಮಾಡಿದ್ರಂತೆ. ಟೈಮ್ಸ್ ಪತ್ರಿಕೆಯ ಪತ್ರಕರ್ತೆಯರಾದ ಕಂಟೋರ್ ಮತ್ತು ಥೂಹೆಮ್ ಅತ್ಯುನ್ನತ ಸ್ಥಾನದಲ್ಲಿರುವವರ ಮತ್ತು ಶ್ರೀಮಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನ ಬಹಿರಂಗವಾಗಿ ಪತ್ರಿಕೆಗಳಲ್ಲಿ ವರದಿ ಮಾಡಿದ್ರು. ಅವರ ಈ ಪರಿಶ್ರಮಕ್ಕೆ ವಿಶ್ವ ಖ್ಯಾತ ದಿ ನ್ಯೂಯಾರ್ಕ್ ರೊನಾರ್ನ್ ಫಾರೋ ಪ್ರಶಸ್ತಿ ನೀಡಿ ಆ ಪತ್ರಕರ್ತರನ್ನ ಗೌರವಿಸಲಾಯಿತು. ಅಲ್ಲಿಂದ ಶುರುವಾದ ಮೀಟೂ ಅಭಿಯಾನ ಇದೀಗ ಸ್ಯಾಂಡಲ್ವುಡ್ವರೆಗೂ ಬಂದು ತಲುಪಿದೆ.
ಇದಕ್ಕೂ ಮೊದಲು ಕೂಡ ಮೀಟೂ ಅಸ್ತಿತ್ವದಲ್ಲಿತ್ತು. ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಕಾರ್ಯಕರ್ತರಾದ ತರಾನಾ ಬರ್ಕ್ ಈ ಪದವನ್ನ ಬಳಸಿದ್ದರಂತೆ. ಸ್ಪ್ಯಾನಿಷ್ನಲ್ಲಿ #YoTambien, ಇಟಲಿಯಲ್ಲಿ #QuellaVoltaChe, ಫ್ರೆಂಚ್ನಲ್ಲಿ #BalanceTonPorc ಎನ್ನುವ ಹೆಸರುಗಳಲ್ಲಿ ಈ ಮೀಟೂ ಆವರಿಸಿದೆ.
ಅವರು ತಮ್ಮ ಮೇಲೆ ಮಾಡಿದಂತಹ ದೌರ್ಜನ್ಯವನ್ನ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





