ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಎಂ.ಜೆ. ಅಕ್ಬರ್ ಮೇಲೆ ಈಗಾಗಲೇ 10 ಲೈಂಗಿಕ ದೌರ್ಜನ್ಯದ ದೂರುಗಳು ಮೀಟೂ ಕ್ಯಾಂಪೇನ್ನಲ್ಲಿ ಕೇಳಿಬಂದಿವೆ. ಇದೀಗ ಹನ್ನೋಂದನೇ ದೂರು ಕೂಡ ದಾಖಲಾಗಿದೆ. ಪತ್ರಕರ್ತೆ ಮಜ್ಲಿ ಡಿ ಪುಮ್ ಕಂಪ್, ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ನನ್ನ ಈ ಕಥೆಯು ಹೇಸಿಗೆಯ ಸಾಗರದಲ್ಲಿ ಸಣ್ಣ ಹನಿ ಎಂಬಂತೆ ತೋರುತ್ತದೆ ಎಂದಿದ್ದಾರೆ. 2007 ರಲ್ಲಿ ಅಕ್ಬರ್ ಒಂದು ಪತ್ರಿಕೆಯ ಪತ್ರಕರ್ತ, ಸಂಪಾದಕ ಆಗಿ ಕೆಲಸ ನಿರ್ವಹಿಸಿದ್ದರು. ಆ ಪತ್ರಿಕೆಯಲ್ಲಿ ನಾನು ಇಂಟರ್ನ್ಶಿಪ್ ಮಾಡುತ್ತಿದ್ದೆ. ಆ ವೇಳೆ ಅವರು ಅಂಗಾಂಗಗಳನ್ನ ಟಚ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಶ್ಲೀಲವಾಗಿ ಮಾತಾನಾಡಿ ಅಸಭ್ಯವಾಗಿ ನಡೆಸಿಕೊಳ್ತಿದ್ರು ಅಂತಾ ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





