Breaking News

ಆರ್​ಬಿಐ ಹಾಗೂ ಕೇಂದ್ರದ ನಡುವೆ ‘ಸಾಲ’ದ ಸಮರ?

ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲಾ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಆರ್​ಬಿಐ ಅಧಿಕಾರಿಗಳ ಮಾತು ಪುಷ್ಠಿಕರಿಸುವಂತಿದೆ. ಈಗಾಗಲೇ ಆರ್​ಬಿಐ 3.6 ಲಕ್ಷ ಕೋಟಿ ಹಣವನ್ನ ಸೆಂಟ್ರಲ್​ ಬ್ಯಾಂಕ್​ಗಳಿಗೆ ನೀಡಿದ್ದು, ಇದು ಸೆಂಟ್ರಲ್​ ಬ್ಯಾಂಕ್​ ಸರ್ಕಾರಕ್ಕೆ ಮೀಸಲಿಟ್ಟ 9.59 ಲಕ್ಷ ಕೋಟಿ ಮೊತ್ತದ ಮೂರನೇ ಒಂದು ಭಾಗಕ್ಕಿಂದ ಅಧಿಕ ಮೊತ್ತವಾಗಿದೆ, ಆದರೆ ಬ್ಯಾಂಕ್​ ಮಂಡಳಿ ಇದುವರೆಗೂ ಆರ್​ಬಿಐ ನೀಡಿರುವ ಮೊತ್ತವನ್ನು ಕ್ರೂಢೀಕರಿಸುವಲ್ಲಿ ವಿಫಲವಾಗಿದೆ. ಅಂದರೆ ​ಸೆಂಟ್ರಲ್​ ಬ್ಯಾಂಕ್​ ಸಾಲದ ರೂಪದಲ್ಲಿ ನೀಡಿರುವ ಹಣ ಇನ್ನೂ ಬ್ಯಾಂಕಿನ ಕೈ ಸೇರಿಲ್ಲ ಅಂತ ಆರ್​ಬಿಐ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಸರ್ಕಾರ ತನ್ನ ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಆರ್​ಬಿಐನಿಂದ ಹೆಚ್ಚಿನ ಮೊತ್ತ ನೀಡುವಂತೆ ನಿರೀಕ್ಷಿಸಿದೆ ಆದ್ರೆ , ಇದರಿಂದಾಗಿ ಮುಂಬರುವ ಅಪಾಯ ಎದುರಿಸಲು ಆರ್​ಬಿಐ ತಯಾರಿಲ್ಲಾ ಅಂತ ಆರ್​ಬಿಐನ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ನಡುವಿನ ಮುಸುಕಿನ ಗುದ್ದಾಟದಲ್ಲಿ ಸಾರ್ವಜನಿಕರು ತೊಂದ್ರೆ ಅನುಭವಿಸದಿದ್ರೆ ಅಷ್ಟೇ ಸಾಕು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *