Breaking News

ಆಸ್ತಾನಾ ಭದ್ರತೆಗೆ ನಿಂತರಾ ರಾಷ್ಟ್ರೀಯ ಭದ್ರತಾ ಸಲಹೆಗಾರ..?

ನವದೆಹಲಿ: ಸಿಬಿಐ ಆಂತರಿಕ ಜಟಾಪಟಿ ಬೀದಿಗೆ ಬಂದು ಕೇಂದ್ರ ಕೈಗೊಂಡ ನಿರ್ಧಾರಕ್ಕೆ ವಿಪಕ್ಷಗಳಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಸಿಬಿಐ ಎರಡನೇ ವಿಶೇಷ ನಿರ್ದೇಶಕ ರಾಕೇಶ್​ ಆಸ್ತಾನಾ ವಿರುದ್ಧ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮನೀಷ್ ಕುಮಾರ್ ಸಿನ್ಹಾರನ್ನ ದಿಢೀರನೇ ನಾಗ್ಪುರಕ್ಕೆ ವರ್ಗಾವಣೆ ಮಾಡಿದ್ದು ಕೂಡ ವಿವಾದಕ್ಕೆ ಗುರಿಯಾಗಿದೆ. ಟ್ರಾನ್ಸ್​ಫರ್​ ಪ್ರಶ್ನಿಸಿ ಸುಪ್ರೀಂಗೆ ಅಹವಾಲು ಸಲ್ಲಿಸಿರುವ ಸಿನ್ಹಾ, ರಾಕೇಶ್​ ಆಸ್ತಾನಾಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಆಪ್ತರಾಗಿದ್ದು, ಪ್ರಕರಣದ ತನಿಖೆಯಲ್ಲಿ ದೋವಲ್​ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೊತೆಗೆ ತನಿಖೆಗೆ ಅಗತ್ಯವಾದ ದಾಖಲೆ ಕಲೆಹಾಕಲು ಪರಿಶೋಧನೆ ನಡೆಸಲೂ ಕೂಡ ಅನುಮತಿ ನೀಡಲಿಲ್ಲ ಅಂತಾ ದೋವಲ್ ವಿರುದ್ಧ ಸಿನ್ಹಾ ಆರೋಪಿಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಆರೋಪ ತಳುಕಿ ಹಾಕಿಕೊಂಡಿರುವ ಉದ್ಯಮಿಯೊಬ್ಬರ ರಕ್ಷಣೆಗೆಗಾಗಿ ಕೇಂದ್ರ ರಾಜ್ಯ ಖಾತೆ ಸಚಿವರು ಉದ್ಯಮಿಯಿಂದ ಲಂಚ ಪಡೆದಿರುವ ಬಗ್ಗೆಯೂ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *