ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರಕರಣದ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ಸಿಡಿಮಿಡಿಗೊಂಡಿದ್ದಾರೆ. ಈ ಕಾರಣ ವಿಚಾರಣೆಯನ್ನ ನವೆಂಬರ್ 22ಕ್ಕೆ ಮುಂದೂಡಿದ್ದಾರೆ.ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತನ್ನನ್ನು ಕಡ್ಡಾಯ ರಜೆ ಮೇಲೆ ಕಳಿಸಿರುವ ಕೇಂದ್ರ ಸರ್ಕಾರದ ನಡೆ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಇಂದು ವಿಚಾರಣೆ ವೇಳೆ, ಅಲೋಕ್ ವರ್ಮಾ ವಿರುದ್ಧ ಆರೋಪಗಳ ಬಗ್ಗೆ ಸಿವಿಸಿ ನೀಡಿರುವ ವರದಿ ಹಾಗೂ ಅದಕ್ಕೆ ಅಲೋಕ್ ವರ್ಮಾ ಅವರು ನೀಡಿರುವ ಪ್ರತಿಕ್ರಿಯೆ ಮಾಧ್ಯಮದಲ್ಲಿ ಸೋರಿಕೆಯಾಗಿರುವ ಕುರಿತು ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅಸಮಾಧಾನ ವ್ಯಕ್ತಪಡಿಸಿದ್ರು. ಎಲ್ಲಾ ದಾಖಲೆಗಳನ್ನ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು. ಅದರೂ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ರು. ಇದರಿಂದ ಸಿಟ್ಟಾದ ಗೊಗೋಯಿ, ಇಂದು ವಿಚಾರಣೆ ನಡೆಯುವುದಿಲ್ಲ. ವಿಚಾರಣೆಗೆ ನೀವ್ಯಾರೂ ಅರ್ಹರಲ್ಲ ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





