Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

5ಜಿ ಅಂದರೇನು? ಭಾರತೀಯರಿಗೆ 5ಜಿ ಸೇವೆ ಸಿಗೋದು ಯಾವಾಗ…,?

ಟೆಕ್ನಾಲಜಿಯಲ್ಲಿ ಜಗತ್ತು ಫಾಸ್ಟ್ ಅಂಡ್ ಫ್ಯೂರಿಯಸ್​ ಆಗಿ ಮುಂದೆ ಸಾಗ್ತಿದೆ. 2ಜಿ, 3ಜಿ ಬಳಸ್ತಿದ್ದ ಜನ ಈಗ 4ಜಿ ನೆಟ್​ವರ್ಕ್​ ಯೂಸ್​ ಮಾಡ್ತಿದ್ದಾರೆ. ಇನ್ನೇನು 2020ಕ್ಕೆ 4ಜಿ ನೆಟ್​ವರ್ಕ್ ಬದಲಿಗೆ 5ನೇ ಜನರೇಷನ್ ನೆಟ್​ವರ್ಕ್ ಬಳಕೆಗೆ ಕಾತುರರಾಗಿದ್ದಾರೆ. ಅಷ್ಟಕ್ಕೂ 5ಜಿ ನೆಟ್​ವರ್ಕ್ ಅಂದ್ರೆ ಏನು? ಅದರ ಉಪಯೋಗಗಳೇನು ಅನ್ನೋದು ಇಲ್ಲಿದೆ ನೋಡಿ.5ಜಿ ಅಂದ್ರೇನು?ಪ್ರತಿ ಕೆಲ ವರ್ಷಗಳಿಗೊಮ್ಮೆ ಮೊಬೈಲ್ ಇಂಡಸ್ಟ್ರಿ ಹೊಸ ಜನರೇಷನ್ ಅಥವಾ ಮೊಬೈಲ್ ನೆಟ್​​ವರ್ಕ್​​ನ ‘ಜಿ’ (ಜನರೇಷನ್​) ಪುನರ್​​ಸ್ಥಾಪಿಸುತ್ತದೆ ಅಥವಾ ಅಪ್​​ಗ್ರೇಡ್ ಮಾಡಲಾಗುತ್ತದೆ. 5G ಅನ್ನುವುದು ಸ್ಥಾಪಿತ ನೆಟ್​ವರ್ಕ್​​​. ಇದು ಮೂರು ಅಪ್​ಗ್ರೇಡ್​ಗಳನ್ನು ಆಫರ್ ಮಾಡುತ್ತದೆ. 5ಜಿ ಅಥವಾ 5ನೇ ಜನರೇಷನ್​ ನೆಟ್​ವರ್ಕ್​ನಲ್ಲಿ ಕೇವಲ ಇಂಟರ್​ನೆಟ್​ ಬಳಕೆ ಮಾತ್ರ ಅಪ್​ಗ್ರೇಡ್​ ಆಗಿರೋದಿಲ್ಲ, ಬದಲಿಗೆ ಟೆಕ್ನಾಜಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. 5ಜಿ ನೆಟ್​ವರ್ಕ್​ 4ಜಿಗಿಂತ 10 ಪಟ್ಟು ವೇಗದ್ದಾಗಿರುತ್ತದೆ. ಅಲ್ಲದೇ 5ಜಿ 10,000 Mbps ಸ್ಪೀಡ್​​ನಲ್ಲಿ ಕೆಲಸ ನಿರ್ವಹಿಸುತ್ತದೆ.5ಜಿ ವರ್ಸಸ್​ 4ಜಿ, 3ಜಿ ಮತ್ತ 2ಜಿ5G: 10,000 Mbps4G (LTE): 1,000 Mbps3G: 3.1 Mbps(Mbps- Megabits per second)5G ವಿಶ್ವದ ಟೈಮ್ ಲೈನ್ : ಯಾರಿಗೆ ಯಾವಾಗ 5ಜಿ2019 ಮೊದಲಾರ್ಧ: ಟಾಪ್ 4 ಯುಎಸ್ ಟೆಲಿಕಾಂ ಕ್ಯಾರಿಯರ್ಸ್​​​ಗಳಾಗಿರುವ AT&T, ವರಿಜಾನ್ ಸ್ಪ್ರಿಂಟ್ ಮತ್ತು ಟಿ-ಮೊಬೈಲ್​​​ಗಳು 5ಜಿ ಸೇವೆಯನ್ನು ಆರಂಭಿಸಲಿವೆ. ದಕ್ಷಿಣ ಕೋರಿಯಾ ಕೂಡ ಮುಂದಿನ ವರ್ಷದ ಮಾರ್ಚ್​​​ನಲ್ಲಿ 5ಜಿ ಬಿಡುಗಡೆಗೊಳಿಸುವ ಪ್ಲಾನ್​ನಲ್ಲಿದೆ.2019ರ ಕೊನೆಗೆ: ಜಪಾನ್​ನಲ್ಲಿ 5ಜಿ ಸರ್ವೀಸ್​ ಲಾಂಚ್ ಮಾಡಲಾಗುತ್ತದೆ.2020: ಚೀನಾ ಮತ್ತು ಹೆಚ್ಚಿನ ಪಾಶ್ಚಿಮಾತ್ಯ ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಭಾರತೀಯ ಸರ್ಕಾರವು ಇದೇ ಸಂದರ್ಭದಲ್ಲಿ 5ಜಿ ನೆಟ್​​ವರ್ಕ್ ಸೇವೆಯ ಆರಂಭಿಕ ಹಂತವನ್ನು ಪ್ರಾರಂಭಿಸಲಿದೆ.2022: ಭಾರತವು ಸಂಪೂರ್ಣವಾಗಿ 5ಜಿ ನೆಟ್​​ವರ್ಕ್ ಸ್ಥಾಪಿಸಲಿದೆ.5ಜಿ ಸ್ಮಾರ್ಟ್​ ಫೋನ್ಸ್​ಗಳು:ಒನ್ ಪ್ಲಸ್, ಹುವಾಯಿ ಮತ್ತು ಶಿಯೋಮಿ ಈ ಮೂರೂ ಸಂಸ್ಥೆಗಳು 5ಜಿ ನೆಟ್​ವರ್ಕ್​ಗೆ ಸಪೋರ್ಟ್​ ನೀಡುವ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.ವಿಶ್ವದ ಮೊದಲ 5ಜಿ ನೆಟ್​ವರ್ಕ್​ ಎಲ್ಲಿ ಲಾಂಚ್​?ವಿಶ್ವದ ಮೊದಲ 5ಜಿ ನೆಟ್​ವರ್ಕ್ ಅಮೇರಿಕಾದಲ್ಲಿ ಬಿಡುಗಡೆಗೊಳ್ಳಲಿದೆ. ಅಮೇರಿಕಾ ಮೂಲದ ಟೆಲ್ಕೋ ವರಿಜಾನ್ ವಿಶ್ವದ ಮೊದಲ ಕಮರ್ಷಿಯಲ್ 5ಜಿ ಸೇವೆಯನ್ನು ತಮ್ಮ ಗ್ರಾಹಕರಿಗೆ ಕೆಲವು ಭಾಗದಲ್ಲಿ ಅಂದರೆ ಹೂಸ್ಟನ್, ಇಂಡಿನಾಪೋಲಿಸ್, ಲಾಸ್ ಏಂಜಲೀಸ್ ಮತ್ತು ಸಾಕ್ರಮೆಂಟೋ ಭಾಗದಲ್ಲಿ ಬಿಡುಗಡೆಗೊಳಿಸಲಿದೆ. ವರಿಜಾನ್ 5ಜಿ ಹೋಮ್ ನೆಟ್​​​ವರ್ಕ್ 5ಜಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಯನ್ನೂ ಕೂಡ ನೀಡಲಿದೆ. 5ಜಿ ಹೋಮ್ ಕಸ್ಟಮರ್​ಗೆ ಯುಟ್ಯೂಬ್ ಟಿವಿ ಉಚಿತವಾಗಿ ಸಿಗುತ್ತದೆ. ಮೂರು ತಿಂಗಳ ಅವಧಿಗೆ ಮತ್ತು ಉಚಿತ ಆಪಲ್ ಟಿವಿ 4ಕೆ ಅಥವಾ ಗೂಗಲ್ ಕ್ರೋಮ್ ಕಾಸ್ಟ್ ಆಲ್ಟ್ರಾ ಡಿವೈಸ್ ಇನ್ಸ್ಟಾಲೇಷನ್ ನಲ್ಲಿ ಅಳವಡಿಸಲಾಗುತ್ತದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *