ಮೊಂಟೆಪದವಿನಲ್ಲಿ ಮೇ 30ರಂದು ಗುಡ್ಡ ಕುಸಿದು ಕುಟುಂಬವೊಂದರ ಮೂವರು ಪ್ರಾಣ ಕಳೆದುಕೊಂಡ ದುರ್ಘಟನೆ ಸಂಭವಿಸಿದ ಬಳಿಕ ಮನೆ ತೊರೆಯುವಂತೆ ಸೂಚಿಸಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ. ನನ್ನ ಮನೆ ಗುಡ್ಡದ ಅಂಚಿನಲ್ಲಿದೆ. ಗುಡ್ಡ ಕುಸಿದರೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಮನೆ ನೆಲಸಮವಾಗಬಹುದು’ ಎಂದು ಸಾಯಿರಾ ತಿಳಿಸಿದರು. ಇನ್ಸಿಡೆಂಟ್ ಕಮಾಂಡರ್ ಪ್ರಮೀಳಾ ನೀಡಿರುವ ನೋಟಸ್ ಅನ್ನು ಅವರು ತೋರಿಸಿದರು. ಕಳೆದ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆಯ ಹಿತ್ತಿಲಿನಲ್ಲಿದ್ದ ನಾಲ್ಕು ತೆಂಗಿನ ಮರಗಳು ನೆಲಕ್ಕುರುಳಿವೆ’ ಎಂದು ಮನೆಕೆಲಸಕ್ಕೆ ಹೋಗಿ ಬದುಕು ಸಾಗಿಸುತ್ತಿರುವ ಸಾಯಿರಾ ನೆನಪಿಸಿಕೊಂಡರು. ಬಡಾವಣೆ ನಿರ್ಮಾಣಕ್ಕಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದಿರುವುದರಿಂದಲೇ ಭೂಕುಸಿತ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

