Welcome to bigtvnews   Click to listen highlighted text! Welcome to bigtvnews
Breaking News

ಸೀತಾರಾಮ ಕಲ್ಯಾಣ' ಬಿಡುಗಡೆಗೆ ದಿನಾಂಕ ನಿಗದಿ ಆಯ್ತು.!

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 25 ರಂದು ರಾಜ್ಯಾದ್ಯಂತ ‘ಸೀತಾರಾಮ ಕಲ್ಯಾಣ’ ರಿಲೀಸ್ ಆಗಲಿದೆ. ಎ.ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಚಿತ್ರದ ವಿತರಣೆ ಹಕ್ಕುಗಳು ಜಯಣ್ಣ ಕಂಬೈನ್ಸ್ ಪಾಲಾಗಿದ್ದು, ಜನವರಿ 25 ರಂದು ಚಿತ್ರವನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್, ರಚಿತಾ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಶರತ್ ಕುಮಾರ್, ಮಧೂ, ಸಂಜಯ್ ಕಪೂರ್, ಭಾಗ್ಯಶ್ರೀ, ಆದಿತ್ಯ ಮೆನನ್, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಕ್ಲೈಮ್ಯಾಕ್ಸ್ ಹಂತದಲ್ಲಿ ‘ಸೀತಾ ರಾಮ ಕಲ್ಯಾಣ’ ಚಿತ್ರೀಕರಣ ಅನೂಪ್ ರುಬೆನ್ಸ್ ಸಂಗೀತ ಸಂಯೋಜಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿರುವವರು ಅನಿತಾ ಕುಮಾರಸ್ವಾಮಿ. ಈಗಾಗಲೇ ಹಿಂದಿ ಚಿತ್ರದ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದು, ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ. ‘ಸೀತಾರಾಮ’ ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್ ಹಲವು ವಿಶೇಷತೆಗಳಿಂದ ಸದ್ದು ಮಾಡಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ನೋಡಲು ನೀವು ರೆಡಿನಾ.. ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:Bigtvnews

Spread the love

About Shaikh BIG TV NEWS, Hubballi

Check Also

ನ.25ರಂದು ಬಿಗ್ ಬಾಸ್ ಖ್ಯಾತಿಯ, ವಿಶ್ವನಾಥ ಮತ್ತು ಅವರ ತಂಡದ ಹೊಸ ಸಾಂಗ್ ರಿಲೀಸ್

ಧಾರವಾಡ : ಬಿಗ್ ಬಾಸ್ ಖ್ಯಾತಿಯ ಮತ್ತು ಅಪ್ಪಟ ಉತ್ತರ ಕರ್ನಾಟಕದ ಪ್ರತಿಬೆ ವಿಶ್ವನಾಥ ಹಾವೇರಿ ಹಾಗೂ ತಂಡದವರು ಹೊಸ …

Leave a Reply

Your email address will not be published. Required fields are marked *

You cannot copy content of this page
Click to listen highlighted text!