Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕೆರೆ ಮಣ್ಣು ಮಾಫಿಯಾ ಗ್ಯಾಂಗ್​ ವಿರುದ್ಧ ಕಾಶೆಂಪೂರ್ ಗರಂ​​… ಈ ನಾಡು ವರದಿಗೆ ಸಚಿವರ ಸ್ಪಂದನೆ

ಬೀದರ್​: ಜಿಲ್ಲೆಯ ವಿವಿಧ ಕೆರೆಗಳಿಂದ ಫಲವತ್ತಾದ ಮಣ್ಣು ಮಾರಾಟ ಮಾಡುವ ಗ್ಯಾಂಗ್​ವೊಂದರ ಬಣ್ಣ ಬಯಲು ಮಾಡಿದ್ದ ‘ಈನಾಡು ಇಂಡಿಯಾ’ ವರದಿಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸ್ಪಂದಿಸಿದ್ದು, ರಾಜ್ಯದ ಮಣ್ಣು ಮಾರಾಟ ದಂಧೆ ನಡೆದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬರಗಾಲದಿಂದ ತತ್ತರಿಸಿ ಹೊಗಿರುವ ಜಿಲ್ಲೆಯಲ್ಲಿ ಬರ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದು ಕೆರೆಗಳ ಹೊಳೆತ್ತುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ಮಹಾರಾಷ್ಟ್ರ ಮೂಲದವರು ಜಿಲ್ಲೆಯ ಕಮಲನಗರ ಪಟ್ಟಣದ ಕೆರೆಯಲ್ಲಿನ ಫಲವತ್ತಾದ ಮಣ್ಣು ಸಮಿಪದ ಮಹಾರಾಷ್ಟ್ರ ದ ರೈತರ ಗದ್ದೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡ್ತಿರುವ ಜಾಲದ ಕುರಿತು ಈ ನಾಡು ಇಂಡಿಯಾ ಕನ್ನಡದಲ್ಲಿ ವರದಿ ಹಾಕಲಾಗಿತ್ತು. ಇದರಿಂದ ಎಚ್ಚೆತ್ತ ಸಚಿವರು ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವರು, ರಾಜ್ಯದ ಫಲವತ್ತಾದ ಮಣ್ಣು ರಾಜ್ಯದ ರೈತರಿಗೆ ಸೇರಿದ್ದು. ಅದನ್ನು ಅನ್ಯರಪಾಲಾಗಲು ಬಿಡುವುದಿಲ್ಲ. ಯಾವುದೇ ಹಣ ಪಡೆಯದೆ ಕೃಷಿಕರ ಭೂಮಿಗೆ ಒದಗಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಖುದ್ದಾಗಿ ಹೋಗಿ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *