ಬಡವರು ಮತ್ತು ದಮನಿತ ಜನರ ಉದ್ಧಾರಕ್ಕಾಗಿಯೇ ತಮ್ಮಿಡೀ ಜೀವನವನ್ನು ತೇಯ್ದು, 111 ವರ್ಷ ಸಾರ್ಥಕ ಜೀವನ ಬದುಕಿದ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.ಹಲವಾರು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ‘ನಡೆದಾಡುವ ದೇವರು’ ಎಂದು ವಿಶ್ವದಾದ್ಯಂತ ಜನಜನಿತರಾಗಿದ್ದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಚನ ಪಡೆದು ಅವರಿಂದ ಸಲಹೆಗಳನ್ನು ಪಡೆದಿದ್ದರು.
Breaking News: ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ ‘ನಡೆದಾಡುವ ದೇವರು’ನಿರ್ವಾರ್ಥದಿಂದ ಸಮಾಜದ ಏಳಿಗೆಗೆ ಸೇವೆ ಮಾಡಿದ್ದಲ್ಲದೆ, ನಿಷ್ಕಲ್ಮಷ ವ್ಯಕ್ತಿತ್ವದಿಂದ ಕೋಟ್ಯಂತರ ಭಕ್ತಾದಿಗಳನ್ನು ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು, ಕೆಲ ದಿನಗಳ ಅನಾರೋಗ್ಯದ ನಂತರ ಜನವರಿ 21ರಂದು ಬೆಳಿಗ್ಗೆ 11.44 ನಿಮಿಷಕ್ಕೆ ದೈವಾಧೀನರಾದರು.
ಅವರ ಅಗಲಿಕೆಯಿಂದ ಇಡೀ ವಿಶ್ವದಾದ್ಯಂತ ಪಸರಿಸಿರುವ ಭಕ್ತಾದಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಕೈಂಕರ್ಯವನ್ನು ಕೊಂಡಾಡಿ ಜನರು ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಉದಾತ್ತ ವ್ಯಕ್ತಿತ್ವವನ್ನು ನೆನೆದು ಕೋಟ್ಯಂತರ ಭಕ್ತಾದಿಗಳ ಶೋಕದಲ್ಲಿ ಒಂದಾಗಿದ್ದಾರೆ.
ಲಕ್ಷಾಂತರ ಭಕ್ತರ ಶೋಕದಲ್ಲಿ ನಾನೂ ಭಾಗಿಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಜನರಿಗಾಗಿ, ಅದರಲ್ಲಿಯೂ ಬಡವರಿಗಾಗಿ ಮತ್ತು ದಮನಿತರಿಗಾಗಿ ಬದುಕಿದವರು. ಸಮಾಜದಲ್ಲಿರುವ ಪಿಡುಗುಗಳಾದ ಬಡತನ, ಹಸಿವು ಮತ್ತು ಸಾಮಾಜಿಕ ಅನ್ಯಾಯವನ್ನು ತೊಡೆದುಹಾಕಲು ತಮ್ಮ ಜೀವನವನ್ನೇ ತೊಡಗಿಸಿದ್ದರು. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಅವರ ಲಕ್ಷಾಂತರ ಭಕ್ತರ ಶೋಕದಲ್ಲಿ ನಾನೂ ಇದ್ದೇನೆ ಎಂದಿದ್ದಾರೆ ಮೋದಿ.
ಶೋಷಿತರ ರಕ್ಷಣೆಗೆ ಸ್ವಾಮೀಜಿ ಶ್ರಮಿಸುತ್ತಿದ್ದರುಸಮಾಜದಲ್ಲಿ ಕಡೆಗಣಿಸಲಾದ ಜನರಿಗಾಗಿ ಅತ್ಯುತ್ತಮ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡಲು ಪುಣ್ಯ ಜೀವಿಗಳಾದ ಡಾ. ಶ್ರೀ ಶ್ರೀ ಶ್ರೀ ಕುಮಾರಸ್ವಾಮಿಗಳು ಕಟಿಬದ್ಧರಾಗಿದ್ದರು. ನಿರ್ವಾರ್ಥ ಸೇವೆ, ಆಧ್ಯಾತ್ಮ ಮತ್ತು ಶೋಷಿತರ ಹಕ್ಕುಗಳ ಸಂರಕ್ಷಣೆಗಾಗಿ ಅವರು ಯಾವತ್ತೂ ಶ್ರಮಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರಿನಲ್ಲಿ ಕೊಂಡಾಡಿದ್ದಾರೆ.
ಲಿಂಗೈಕ್ಯ ‘ನಡೆದಾಡುವ ದೇವರು’ ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





