ಹೈದರಾಬಾದ್: ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಒ.ಪಿ.ರಾವತ್, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಹೆಸರಿನಲ್ಲಿ ನಕಲಿ ವೋಟರ್ ಐಡಿಗಳು ಪತ್ತೆಯಾಗಿವೆ.ಇದೇ 26 ರಂದು ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಅಲ್ಲಿನ ಹೆಚ್ಚುವರಿ ಆರ್ಥಿಕ ಅಪರಾಧ ದಳದ ಡಿಸಿಪಿ ಜೋಗಯ್ಯ ಹೇಳಿದ್ದಾರೆ. ಅನಾಮಧೇಯ ವ್ಯಕ್ತಿಗಳು ಒ.ಪಿ.ರಾವತ್ ಹಾಗೂ ರಜತ್ಕುಮಾರ್ ಹೆಸರಲ್ಲಿ ವೋಟರ್ ಐಡಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆನ್ಲೈನ್ನಲ್ಲಿ ಇವರಿಬ್ಬರ ಹೆಸರು ನಮೂದಿಸಿ ನಕಲಿ ವಿದ್ಯುತ್ ಬಿಲ್, ಫೇಕ್ ವೋಟರ್ಐಡಿ ಅಪ್ಲೋಡ್ ಮಾಡಿದ್ದಾರೆ. ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 419, 468, 471 ಅಡಿ ದೂರು ದಾಖಲಾಗಿದೆ. ಎಲ್ಲಿಂದ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ ಅಂತ ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





